

ಹುಬ್ಬಳ್ಳಿ: ಸಮೀಪದ ಇಸ್ಕಾನ್ ದೇವಸ್ಥಾನದಲ್ಲಿ ಹುಬ್ಬಳ್ಳಿ- ಧಾರವಾಡದ ಶಾಲಾ ಮಕ್ಕಳಿಗಾಗಿ ಸೋಮವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಉತ್ಸವ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಸ್ವರ್ಣ ಗ್ರೂಪ್ ಕಂಪನೀಸ್ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ ಉದ್ಘಾಟಿಸಿ ಮಾತನಾಡಿ, ತಮ್ಮ ಗುರಿ ತಲುಪುವವರೆಗೆ ವಿದ್ಯಾರ್ಥಿಗಳು ವಿರಮಿಸಬಾರದು. ನಿರಂತರ ಅಧ್ಯಯನ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕಲಿಸಿದ ಗುರುಗಳು ಹಾಗೂ ತಂದೆ-ತಾಯಿಗೆ ಗೌರವ ತರಬೇಕು ಎಂದು ಸಲಹೆ ನೀಡಿದರು.
ಇಸ್ಕಾನ್ ಹುಬ್ಬಳ್ಳಿ ಅಧ್ಯಕ್ಷ ರಾಜೀವ ಲೋಚನದಾಸ, ನಂದು ಕೆಮಿಕಲ್ಸ್‌ನ ಉಷಾ ಹೆಗಡೆ ಇತರರು ಇದ್ದರು.