ಥಗ್​ ಲೈಫ್​ ಚಿತ್ರ ಬಿಡುಗಡೆಗೊಳಿಸದಿರಿ

Don't release the movie Thug Life.
ಕನ್ನಡ ಭಾಷೆಯ ಕುರಿತು ಅಸಂಬದ್ಧ ಹೇಳಿಕೆ ನೀಡಿದ ನಟ ಕಮಲ್​ ಹಾಸನ ಅಭಿಯನದ ಥಗ್​ ಲೈಫ್​ ಚಿತ್ರವನ್ನು ರಾಜ್ಯದ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡದಂತೆ ಆಗ್ರಹಿಸಿ ವಿಜಯಪುರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣಕುಮಾರ ಶೆಟ್ಟಿ ಬಣ) ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ಬಸವರಾಜ ತಾಳಿಕೋಟಿ, ಮಹಾಂತೇಶ ಹಿರೇಮಠ, ಆನಂದ ಹಡಗಲಿ ಮತ್ತಿತರರಿದ್ದರು.
Published on

ವಿಜಯಪುರ: ಕನ್ನಡ ಭಾಷೆ ಕುರಿತು ಅಸಂಬದ್ಧ ಹೇಳಿಕೆ ನೀಡಿದ ನಟ ಕಮಲ್​ ಹಾಸನ ಅಭಿಯನದ ತಮಿಳು ಚಲನಚಿತ್ರ ಥಗ್​ ಲೈಫ್​ ಚಿತ್ರವನ್ನು ರಾಜ್ಯದ ಯಾವುದೇ ಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಳಿಸದಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣಕುಮಾರ ಶೆಟ್ಟಿ ಬಣ) ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಬಣದ ಜಿಲ್ಲಾಧ್ಯಕ್ಷ ಬಸವರಾಜ ತಾಳಿಕೋಟಿ ಮಾತನಾಡಿ, ಇತ್ತೀಚೆಗೆ ಥಗ್​ ಲೈಫ್​ ಚಲನಚಿತ್ರದ ಧ್ವನಿ ಸುರಳಿ ಬಿಡುಗಡೆ ಸಮಾರಂಭದಲ್ಲಿ ತಮಿಳು ನಟ ಕಮಲ ಹಾಸನ್​ ಕನ್ನಡ ಹುಟ್ಟಿದ್ದು ತಮಿಳುನಿಂದ ಎಂಬ ಅಸಂಬದ್ಧ ಹೇಳಿಕೆ ನೀಡಿ ಕನ್ನಡಿಗರ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ.

ಅಲ್ಲದೆ, ಕನ್ನಡಿಗರ ಹಾಗೂ ತಮಿಳು ಮಧ್ಯ ವಿಷಬಿಜ ಬಿತ್ತುವ ಜತೆಗೆ ಕನ್ನಡಿಗರಿಗೆ ಅವಮಾನಿಸಿದ್ದಾರೆ. ಇಂತಹ ಹೇಳಿಕೆ ನೀಡಿದ ನಟ ಕಮಲ್​ ಹಾಸನ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಬಾರದೆಂದು ಒತ್ತಾಯಿಸಿದರು.

ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ಹಿರೇಮಠ, ಆನಂದ ಹಡಗಲಿ, ರವಿ ಗೊಳಸಂಗಿ, ಸತೀಶ, ವಿನೂತ್​, ಭೀಮು, ವಿರೇಶ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net