

ವಿಜಯಪುರ: ಪಾಲಕರು ಮಕ್ಕಳಿಗೆ ಒತ್ತಡ ಹೇರದೆ ಮಾನಸಿಕ, ಬೌದ್ಧಿಕವಾಗಿ ಬೆಳೆಯಲು ಅವಕಾಶ ಮಾಡಿಕೊಡಬೇಕೆಂದು ದರಬಾರ ಶಾಲೆ ಸಹ ಶಿಕ್ಷಕಿ ಜಯಶ್ರೀ ಪಾಟೀಲ ಹೇಳಿದರು.
ಇಲ್ಲಿನ ಕೀರ್ತಿ ನಗರದ ಶಮ್ಸ್ ಪೂರ್ವ ಪ್ರಾಥಮಿಕ ಶಾಲೆ ಮತ್ತು ಹಿರಿಯ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಯುಕೆಜಿ ಮಕ್ಕಳಿಗೆ ಪದವಿ ದಿನ, ಆಹಾರ ಮೇಳ ಮತ್ತು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅವರು ಮಾತನಾಡಿದರು.
ಆಹಾರ ಮೇಳ ಹಾಗೂ ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸಲಿವೆ ಎಂದರು.
ಶಮ್ಸ್ ಎಜ್ಯುಕೇಷನ್ ಸೊಸೈಟಿ ಸದಸ್ಯೆ ದರ್ಶನಿ ದರಬಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ವಿಜ್ಞಾನ ವಸ್ತು ಪ್ರದರ್ಶನದಿಂದ ವಿನೂತನ ಸಂಶೋಧನ್ಮಾಕ ಚಟುವಟಿಕೆಯಲ್ಲಿ ಆಸಕ್ತಿ ವಹಿಸಲು ಪ್ರೇರೇಪಿಸಿದರೆ, ಆಹಾರ ಮೇಳ ಮಕ್ಕಳಿಗೆ ವ್ಯಾಪಾರ ವ್ಯವಹಾರದ ಬಗ್ಗೆ ತಿಳಿಸಿ ಕೊಡಲು ಸಹಾಯಕವಾಗುತ್ತದೆ ಎಂದರು.
ಶಾಲೆ ಆಡಳಿತಾಧಿಕಾರಿ ಸಂಧ್ಯಾ ಸಿ., ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿಕ್ಕಮಕ್ಕಳ ಭಾಷಣ ಮತ್ತು ನೃತ್ಯ ಕಾರ್ಯಕ್ರಮಗಳು ನಡೆದವು. ನಂತರ ಪದವಿ ಪ್ರಮಾಣ ಪತ್ರ ವಿತರಿಸಲಾಯಿತು. ಮುಖ್ಯಶಿಕ್ಷಕಿ ರೇವತಿ ಕುಲಕರ್ಣಿ ಸ್ವಾಗತಿಸಿ ಪರಿಚಯಿಸಿದರು. ಭಾಗ್ಯಶ್ರೀ ಗಾಣಿಗೇರ ನಿರೂಪಿಸಿದರು. ಭಾರತಿ ಶೆಟಗಾರ ವಂದಿಸಿದರು. ಶಾಲಾ ಸಂಯೋಜಕ ದಿಲೀಪ್ ಚೌಧರಿ ಮತ್ತಿತರರಿದ್ದರು.