ಕೋಮುವಾದಕ್ಕೆ ಆದ್ಯತೆ ನೀಡದಿರಿ

3
Published on

ಕೆ.ಎಂ.ದೊಡ್ಡಿ: ಭಾರತದಲ್ಲಿಯೇ ವಿಶಿಷ್ಟತೆಯಿಂದ ಕೂಡಿರುವ ಕರ್ನಾಟಕದ ಬಹು ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕೆ ಹೊರತು ಕೋಮುವಾದಕ್ಕೆ ಆದ್ಯತೆ ನೀಡಬಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು. ಇಲ್ಲಿನ ಭಾರತೀ ಕಾಲೇಜು ಕ್ರೀಡಾಂಗಣದಲ್ಲಿ ಆಯೋಜಿಸಿರುವ ಭಾರತೀ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು.

ಕರ್ನಾಟಕವು ಬಹುಸಂಸ್ಕೃತಿಯ ಶ್ರೀಮಂತ ನೆಲೆ ಬೀಡಾಗಿದೆ. ಇದಕ್ಕೆ ಹುಳಿ ಹಿಂಡಬೇಡಿ. ಇಲ್ಲಿನ ಜನರು ನೆಮ್ಮದಿಯಿಂದ ಬದಕಲು ಬಿಡಬೇಕು ಎಂದು ಸಲಹೆ ನೀಡಿದರು.

1979ರಲ್ಲಿ ಕುರುಂಜಿ ವೆಂಕಟ್ರಮಣ ಗೌಡರ ಜತೆ ಜಿ.ವಾದೇಗೌಡರನ್ನು ಭೇಟಿ ವಾಡಿದ ಸಂದರ್ಭದಲ್ಲಿ, ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಎಲ್ಲಿ ಬೇಕಾದರೂ ಸೀಟು ಸಿಗುತ್ತದೆ. ಗ್ರಾಮೀಣ ಭಾಗದಲ್ಲಿ ಕಡಿಮೆ ಅಂಕ ಪಡೆದ ಬಡ ವಿದ್ಯಾರ್ಥಿಗಳಿಗೆ ಮೊದಲು ಸೀಟು ಕೊಡಬೇಕು ಎಂದು ವಾದೇಗೌಡರು ನಿರ್ಧಾರ ವಾಡಿದ್ದು, ನನಗೆ ಹೆಮ್ಮೆ ಎನಿಸಿತು. ಭಾರತೀ ಎಜುಕೇಷನ್ ಟ್ರಸ್ಟ್ ಒಂದು ದೊಡ್ಡ ಸಂಸ್ಥೆಯಾಗಿ ಬೆಳೆದು ವಿವಿಧ ರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಕೆ.ಎಂ ದೊಡ್ಡಿಗೆ ಆಗಮಿಸುತ್ತಿರುವುದು ವಾದೇಗೌಡರ ಪರಿಶ್ರಮದ ಫಲವಾಗಿದೆ. ವಿದ್ಯಾರ್ಥಿಳಿಗೆ ಶಿಕ್ಷಣ ನೀಡಿ, ರೈತರಿಗೆ ಕಾರ್ಖಾನೆ ತಂದುಕೊಟ್ಟ ವಾದೇಗೌಡ ಅವರನ್ನು ಪ್ರತಿಯೊಬ್ಬರೂ ಸ್ಮರಿಸಿಕೊಳ್ಳಬೇಕಿದೆ ಎಂದರು.

ಶಾಸಕ ರವಿಕುವಾರ್ ಗೌಡ (ಗಣಿಗ) ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿ, ಮಂಡ್ಯ ಜಿಲ್ಲೆಯ ಕಾವೇರಿ ಹೋರಾಟದ ಮುಂಚೂಣಿ ನಾಯಕ ಜಿ. ವಾದೇಗೌಡ ಅವರು ನಮ್ಮಂತಹ ಸಾವಿರಾರು ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಹೋರಾಟದಲ್ಲಿ ನಾನು ಭಾಗವಹಿಸಿರುವುದು ಪುಣ್ಯ. ನನಗೂ ವಾದೇಗೌಡ ಅವರಿಗೂ ತಾತ ಮೊಮ್ಮಗನ ಸಂಬಂಧವಾಗಿದ್ದು, ರಾಜಕೀಯ, ಶಿಕ್ಷಣ, ಧಾರ್ಮಿಕ, ಆರೋಗ್ಯ ಹೋರಾಟ ಕ್ಷೇತ್ರದಲ್ಲಿ ಅಪಾರ ಸಾಧನೆ ವಾಡಿರುವ ಜಿ.ವಾದೇಗೌಡ ಅವರು ಧೀಮಂತ ವ್ಯಕ್ತಿಯಾಗಿದ್ದು, ಇವರಿಗೆ ಕರ್ನಾಟಕದ ರತ್ನ ಪ್ರಶಸ್ತಿ ನೀಡಲು ನಾನು ಕೂಡ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.

ಭಾರತೀ ಕಾಲೇಜಿನಲ್ಲಿ 14,000 ವಿದ್ಯಾರ್ಥಿಗಳು ವ್ಯಾಸಂಗ ವಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿಗಳು ಸಂಸ್ಕಾರ, ಸಂಸ್ಕೃತಿ ಹಾಗೂ ವಾನವೀಯ ಮೌಲ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಮಧು.ಜಿ ವಾದೇಗೌಡ ಅವರು ಭಾರತೀ ಕಾಲೇಜನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುವುದರ ಜತೆಗೆ ಗ್ರಾಮೀಣ ಮಕ್ಕಳಿಗಾಗಿ 10 ಕೋಟಿ ರೂ.ವೆಚ್ಚದ ಸ್ಪೋರ್ಟ್ಸ್ ಕ್ಲಬ್ ತೆರೆದು ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲ ವಾಡಿಕೊಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಮಂಡ್ಯ ವಿಶ್ವವಿದ್ಯಾಲಯ ಉಳಿದಿದೆ. ಇದರ ಪ್ರಯುಕ್ತ ಡಿಸೆಂಬರ್ ತಿಂಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಒಳಗೊಂಡ ಅತ್ಯುತ್ತಮ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು. ಭಾರತೀ ಕಾಲೇಜಿನ ವಿದ್ಯಾರ್ಥಿಗಳು ಕೂಡ ಭಾಗವಹಿಸಲಿದ್ದಾರೆ.

. ರವಿ ಗಣಿಗ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net