ಜೀವ ನದಿ ಕಲುಷಿತವಾಗದಿರಲಿ

21ark-2
ಅರಕಲಗೂಡು ತಾಲೂಕಿನ ರಾಮನಾಥಪುರಕ್ಕೆ ಶನಿವಾರ ಆಗಮಿಸಿದ ಕಾವೇರಿ ಜಾಗೃತಿ ರಥಯಾತ್ರೆಯನ್ನು ಗ್ರಾಮಸ್ಥರು ಬರಮಾಡಿಕೊಂಡರು. ಸದಾಶಿವ ಸ್ವಾಮೀಜಿ, ಕುಮಾರಸ್ವಾಮಿ, ಸಿದ್ದಯ್ಯ ಇತರರಿದ್ದರು.
Published on

ಅರಕಲಗೂಡು: ಮಲಿನಗೊಳ್ಳುತ್ತಿರುವ ಜೀವ ನದಿಯನ್ನು ಪೂಜಿಸಿ ಆರಾಧಿಸುವ ಮೂಲಕ ಕಲುಷಿತಗೊಳ್ಳದಂತೆ ಜಾಗ್ರತೆ ವಹಿಸಬೇಕು ಎಂದು ಶಿರದನಳ್ಳಿ ಬಸವಕಲ್ಯಾಣ ಮಠದ ಶ್ರೀಸದಾಶಿವ ಸ್ವಾಮೀಜಿ ಮನವಿ ಮಾಡಿದರು.

ತಾಲೂಕಿನ ರಾಮನಾಥಪುರಕ್ಕೆ ಕೊಡಗು ಮಾರ್ಗವಾಗಿ ಆಗಮಿಸಿದ ಕಾವೇರಿ ರಥ ಯಾತ್ರೆಗೆ ಸ್ವಾಗತ ನೀಡಿ ಮಾತನಾಡಿದ ಅವರು, ಜನ, ಜಾನುವಾರುಗಳು, ಸಸ್ಯ ಸಂಕುಲಕ್ಕೆ ಜೀವ ಸಂಜೀವಿನಿಯಾಗಿರುವ ಹಾಗೂ ರೈತಾಪಿ ವರ್ಗದ ಜನರ ಜೀವನಾಡಿಯಾಗಿರುವ ಕಾವೇರಿ ನದಿ ಕಲುಷಿತಗೊಂಡು ಸಂಪೂರ್ಣ ಸೊರಗತೊಡಗಿದೆ. ಅದ್ದರಿಂದ ಪ್ರತಿಯೊಬ್ಬರೂ ನದಿಗಳನ್ನು ಸಂರಕ್ಷಿಸಬೇಕಾಗಿದೆ ಎಂದರು.

ಶ್ರೀಸುಬ್ರಹ್ಮಣ್ಯಸ್ವಾಮಿ ದೇವಾಲಯದ ಪಾರುಪತ್ತೇಗಾರ್ ರಮೇಶ್‌ಭಟ್ ನಲ್ಲಿತೀರ್ಥ ಅವರು ಜನರಿಗೆ ದಾಸೋಹ ವ್ಯವಸ್ಥೆ ಮಾಡಿದ್ದರು. ಕಾವೇರಿ ನದಿ ಸ್ವಚ್ಛತಾ ಸಮಿತಿ ಜಿಲ್ಲಾಧ್ಯಕ್ಷ ಎಂ.ಎನ್.ಕುಮಾರಸ್ವಾಮಿ, ತಾಲೂಕು ಸಮಿತಿ ಅಧ್ಯಕ್ಷ ಸಿದ್ದಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net