

ಸರ್ಕಾರ ರೈತರ ಜೊತೆ ಹುಡುಗಾಟಿಕ್ಕೆ ಆಡಬಾರದು. ಹಾಲಿನ ದರ ಕಡಿತ ನಿರ್ಧಾರ ಕೈ ಬಿಡಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಹಾಲಿನ ದರ ಕಡಿಮೆ ಮಾಡುವುದು ಒಕ್ಕೂಟಗಳ ಸರ್ವನಾಶಕ್ಕೆ ಕಾರಣವಾಗುತ್ತದೆ. ಈಗಾಗಲೇ ನಂದಿನಿ ಹಾಲಿಗೆ ಸ್ಪರ್ಧಾತ್ಮಕವಾಗಿರುವ ಖಾಸಗಿ ಡೈರಿಗಳು ಲೀಟರ್ ಹಾಲಿಗೆ 45 ರಿಂದ 50 ರೂ. ನೀಡುತ್ತಿದ್ದಾರೆ. ಹೈನುಗಾರಿಕೆ ರೈತರು ಅತ್ತ ಮುಖ ಮಾಡುತ್ತಿದ್ದಾರೆ.
ಅಮುಲ್ ಹಾಲಿನ ಜೊತೆ ಸೆಣಸಾಡಿ ಮಾರಾಟ ರೂಪಿಸಬೇಕಾಗಿದೆ ಸಾಮಾಜಿಕ ಜಾಲತಾಣದ ಮೂಲಕ ಎಲ್ಲವೂ ತಿಳಿಯುತ್ತಿದೆ ಇನ್ನು ಮೋಸ ಮಾಡುವುದು ಸಾಧ್ಯವಿಲ್ಲ ಇನ್ನಾದರೂ ಎಚ್ಚೆತ್ತುಕೊಂಡು ನಿರ್ಧಾರ ಕೈಗೊಳ್ಳಲಿ ರೈತರಿಗೆ ಹಾಲಿನ ದರ ಕಡಿಮೆ ನೂತನ ಸರ್ಕಾರದ ಬಳುವಳಿಯಾಗಿ ಬಾರದು. ಕೂಡಲೇ ಹಾಲಿನ ದರ ಹೇಳಿಕೆ ನಿರ್ಧಾರ ಕೈ ಬಿಡಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.