ಅನುಕಂಪ ಬೇಡ - ಅವಕಾಶ ಕೊಡಿ : ಕವಿತಾ ಪಾಟೀಲ ಪ್ರಚಾರ

Don't be sorry, give it a chance
ಗೊಳಸಂಗಿಯಲ್ಲಿ ಬುಧವಾರ ಜೆಡಿಎಸ್ ಅಭ್ಯರ್ಥಿ ಸೋಮನಗೌಡ ಪಾಟೀಲ (ಮನಗೂಳಿ) ಪರ ಅವರ ಪತ್ನಿ ಕವಿತಾ ಪಾಟೀಲ ಮನೆಮನೆಗೆ ತೆರಳಿ ಮತಯಾಚಿಸಿದರು. ಪಾರ್ವತಿ ಪಾಟೀಲ, ಕಮಲಾ ಪೂಜಾರಿ, ವೀಣಾ ಪಾಟೀಲ, ಜಯಶ್ರೀ ಗುಜಗೊಂಡ, ಸುನಿತಾ ಪಾಟೀಲ, ಮೀನಾಕ್ಷಿ ತೆಳಗಡಿ ಇತರರಿದ್ದರು.
Published on

ಗೊಳಸಂಗಿ: ಸತತ ಮೂರು ಬಾರಿ ಸೋಲಿನ ಕಹಿ ಉಂಡಿರುವ ಅಪ್ಪುಗೌಡರಿಗೆ ಅನುಕಂಪ ಬೇಡ. ಒಂದೇ ಒಂದು ಬಾರಿ ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ ಎಂದು ಬಸವನಬಾಗೇವಾಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೋಮನಗೌಡ ಪಾಟೀಲ (ಮನಗೂಳಿ) ಪರ ಅವರ ಪತ್ನಿ ಕವಿತಾ ಪಾಟೀಲ ಮನವಿ ಮಾಡಿದರು.

ಬುಧವಾರ ಗೊಳಸಂಗಿ, ಬುದ್ನಿ, ಬೀರಲದಿನ್ನಿ ಗ್ರಾಮಕ್ಕೆ ತೆರಳಿ ಮನೆಮನೆ ಭೇಟಿ ನೀಡಿ ಮತಯಾಚಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್, ಬಿಜೆಪಿ ಪಕ್ಷದ ಶಾಸಕರನ್ನು ಕಂಡಿದ್ದೀರಿ. ಮೂರು ಸಲ ಜೆಡಿಎಸ್‌ನ ಅಪ್ಪುಗೌಡರಿಗೆ ಸೋಲಿನ ರುಚಿಯನ್ನೂ ನೀಡಿದ್ದೀರಿ.ಒಂದು ಬಾರಿ ಅವಕಾಶ ನೀಡಿ ಪರೀಕ್ಷೆ ಮಾಡಿ. ನಿಮ್ಮ ಸೇವೆ ಮಾಡುವಲ್ಲಿ ಏನಾದರೂ ಎಡವಿದರೆ ಮರು ಅವಕಾಶ ಕಲ್ಪಿಸಬೇಡಿ ಎಂದರು.

ಪಾರ್ವತಿ ಪಾಟೀಲ, ಸುನಿತಾ ಪಾಟೀಲ, ಜಯಶ್ರೀ ಗುಜಗೊಂಡ, ಬಾಶಾಬಾಯಿ ಪಾಟೀಲ, ಕಮಲಾ ಪೂಜಾರಿ, ವೀಣಾ ಪಾಟೀಲ, ಪಾರ್ವತಿ ಗುಡ್ಡದ, ಮೀನಾಕ್ಷಿ ತೆಳಗಡಿ, ಶಿವಾನಂದ ಶಿರೋಳ, ಮೀರಾಸಾಬ ಲಸ್ಕರೆ, ಹಸನ್‌ಡೋಂಗರಿ ತೇಲಸಂಗ, ಸುಭಾಷ ಚವ್ಹಾಣ, ರಾಮಗೊಂಡ ಬಿರಾದಾರ, ಬಸವರಾಜ ಬಗಲಿ, ಸೋಮು ಬಿರಾದಾರ, ಬಸವರಾಜ ನಾಗರಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net