ಜಮೀನಿನಲ್ಲಿ ಪೈಪ್​ಲೈನ್ ಅಳವಡಿಕೆ ಬೇಡ

18 hkr 01
Published on

ಹಿರೇಕೆರೂರ: ನೀರಾವರಿ ಯೋಜನೆಗೆ ನಮ್ಮ ವಿರೋಧವಿಲ್ಲ. ಬದಲಿಗೆ ಈ ನೆಪದಲ್ಲಿ ರೈತರ ಫಲವತ್ತಾದ ಜಮೀನಿನಲ್ಲಿ ಪೈಪ್​ಲೈನ್ ಅಳವಡಿಸುವುದನ್ನು ವಿರೋಧಿಸುತ್ತಿದ್ದೇವೆ ಎಂದು ಹಿರಿಯ ವಕೀಲ, ಹೋರಾಟಗಾರ ಬಿ.ಡಿ. ಹಿರೇಮಠ ಹೇಳಿದರು.

ಶಿಕಾರಿಪುರ ತಾಲೂಕಿನ ನೀರಾವರಿ ಯೋಜನೆಗೆ ರೈತರ ಜಮೀನಿನಲ್ಲಿ ಪೈಪ್​ಲೈನ್ ಅಳವಡಿಸಿರುವುದನ್ನು ವಿರೋಧಿಸಿ ಪಾದಯಾತ್ರೆ ನಡೆಸುತ್ತಿರುವ ಅವರು ಹಳೆನೀಡನೇಗಿಲು ಗ್ರಾಮದಲ್ಲಿ ಸೋಮವಾರ ಮಾತನಾಡಿದರು.

ರಟ್ಟಿಹಳ್ಳಿಯಲ್ಲಿ ಯೋಜನೆ ಕಾಮಗಾರಿ ವಿರೋಧಿಸಿ 14 ದಿನ ಉಪವಾಸ ಸತ್ಯಾಗ್ರಹ ನಡೆಸಿದ್ದೆ. ಆಗ ಸ್ಥಳಕ್ಕಾಗಮಿಸಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನೀಡಿದ ಭರವಸೆ ಈಡೇರಿಸಿಲ್ಲ. ಕಾರಣ ಪಾದಯಾತ್ರೆ ನಡೆಸುತ್ತಿದ್ದೇನೆ. ಇದು ಸರಿಯಾಗುವವರೆಗೂ ಮುಂದುವರಿಸುತ್ತೇನೆ ಎಂದರು. ಯೋಜನೆಗೆ ನಮ್ಮ ವಿರೋಧವಿಲ್ಲ. ಹಾಗಂತ ರೈತರ ಫಲವತ್ತಾದ ಜಮೀನಿನಲ್ಲಿ ಪೈಪ್​ಲೈನ್ ಅಳವಡಿಸುತ್ತಿರುವುದು ಯಾವ ನ್ಯಾಯ. ರಸ್ತೆ ಅಕ್ಕಪಕ್ಕದಲ್ಲಿ ಪೈಪ್​ಲೈನ್ ಅಳವಡಿಸಬೇಕು ಎಂದರು.

ವಿನಯ ಪಾಟೀಲ, ಎಸ್.ಡಿ. ಹಿರೇಮಠ, ಉಜಿನೆಪ್ಪ ಕೋಡಿಹಳ್ಳಿ, ಹರೀಶ ಇಂಗಳಗೊಂದಿ, ಜಗದೀಶ ಮರಕಳ್ಳಿ, ರಾಜಶೇಖರ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net