ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲ

arivu neravu
ಸಾಸ್ತಾನದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅರಿವು ನಿಮಗಿರಲಿ ನೆರವು 13ನೇ ಮಾಲಿಕೆ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಕೋಟ ಮಾಧವ ಪೈ ಮಾತನಾಡಿದರು.
Published on

ಕೋಟ: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ವೈದ್ಯರ ಸಲಹೆ ಕಡ್ಡಾಯವಾಗಿ ಪಡೆಯಿರಿ. ನಮ್ಮ ಆಹಾರ ಪದ್ಧತಿ ನಮ್ಮಿಂದಲೇ ಬದಲಾಗಿದೆ. ಜಂಕ್‌ಫುಡ್ ಹಾವಳಿಯಿಂದ ವ್ಯತಿರಿಕ್ತ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಕೋಟ ಸಮುದಾಯ ಆರೋಗ್ಯ ಕೇಂದ್ರ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಕೋಟ ಮಾಧವ ಪೈ ಹೇಳಿದರು.

ಸಾಸ್ತಾನದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ಮತ್ತು ಕೋಟ ಪಂಚವರ್ಣ ಮಹಿಳಾ ಮಂಡಲ ಆಶ್ರಯದಲ್ಲಿ ಅರಿವು ನಿಮಗಿರಲಿ ನೆರವು 13ನೇ ಮಾಲಿಕೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

ಕಲ್ಪತರು ಮಹಿಳಾ ಸ್ವಸಹಾಯ ಸಂಘದ ಮಹಿಳೆಯರಿಗೆ ಸಾಸ್ತಾನ ಕೆನರಾ ಬ್ಯಾಂಕ್ ಅಧಿಕಾರಿ ದೀಪಿಕಾ ಕೃಷ್ಣ, ಸರ್ಕಾರ ಹಾಗೂ ಬ್ಯಾಂಕ್‌ಗಳ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಬಿಲ್ಲವ ಯುವವೇದಿಕೆ ಅಧ್ಯಕ್ಷ ರವಿಕಿರಣ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘ ಗೌರವ ಸಲಹೆಗಾರ ಚೆನ್ನಯ ಪೂಜಾರಿ, ಬಿಲ್ಲವ ಯುವ ವೇದಿಕೆ ಮಾಜಿ ಅಧ್ಯಕ್ಷ ರವಿ ಪೂಜಾರಿ, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು. ಕಲ್ಪತರು ಸ್ವಸಹಾಯ ಸಂಘದ ಸೀಮಾ ವಿಜಯ ಪೂಜಾರಿ ಸ್ವಾಗತಿಸಿ, ಉಷಾ ಗಣೇಶ್ ಪೂಜಾರಿ ವಂದಿಸಿದರು. ಬಿಲ್ಲವ ಯುವ ವೇದಿಕೆ ಮುಖಂಡ ಸುರೇಶ್ ಪೂಜಾರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net