ಶಾಮನೂರ ಶಿವಶಂಕ್ರಪ್ಪ ಹೇಳಿಕೆ ನಿರ್ಲಕ್ಷ್ಯ ಮಾಡಿದರೆ ಗಂಭೀರ ಪರಿಣಾಮ : ಪೂಜ್ಯ ಶ್ರೀ ಅಪ್ಪಾರಾವ ದೇವಿ ಮುತ್ಯಾ ಎಚ್ಚರಿಕೆ

ಕಲಬುರಗಿ ರಾಜ್ಯದಲ್ಲಿ ವೀರಶೈವ-ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಹುದ್ದೆಗಳನ್ನು ನೀಡದೆ ಕಡೆಗಣಿಸಲಾಗುತ್ತಿದೆ ಎಂದಿರುವ  ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ಅಧ್ಯಕ್ಷ  ಶಾಮನೂರು ಶಿವಂಶAಕರಪ್ಪ ಅವರ ಮಾತು ಸರಿಯಾಗಿದೆ. ಅವರ ನಿಲುವಿಗೆ ಬೆಂಬಲಿಸುತ್ತೇವೆ ಎಂದು ಶ್ರೀನಿವಾಸ ಸರಡಗಿಯ ಮಹಾಲಕ್ಷ್ಮ ಶಕ್ತಿಪೀಠದ ಅಪ್ಪಾರಾವ ದೇವಿ ಮುತ್ಯಾ ಮತ್ತು ಮಹಾಸಭಾ ಯುವ ಘಟಕದ ಗೌರವ ಅಧ್ಯಕ್ಷ. ಎಂ.ಎಸ್.ಪಾಟೀಲ್ ನರಿಬೋಳ ತಿಳಿಸಿದರು.
IMG-20231004-WA0058
Published on

ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಹುದ್ದೆ ನೀಡಲು ಆಗ್ರಹ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ರಾಜ್ಯದಲ್ಲಿ ವೀರಶೈವ-ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಹುದ್ದೆಗಳನ್ನು ನೀಡದೆ ಕಡೆಗಣಿಸಲಾಗುತ್ತಿದೆ ಎಂದಿರುವ  ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ಅಧ್ಯಕ್ಷ  ಶಾಮನೂರು ಶಿವಂಶAಕರಪ್ಪ ಅವರ ಮಾತು ಸರಿಯಾಗಿದೆ. ಅವರ ನಿಲುವಿಗೆ ಬೆಂಬಲಿಸುತ್ತೇವೆ ಎಂದು ಶ್ರೀನಿವಾಸ ಸರಡಗಿಯ ಮಹಾಲಕ್ಷ್ಮ ಶಕ್ತಿಪೀಠದ ಅಪ್ಪಾರಾವ ದೇವಿ ಮುತ್ಯಾ ಮತ್ತು ಮಹಾಸಭಾ ಯುವ ಘಟಕದ ಗೌರವ ಅಧ್ಯಕ್ಷ. ಎಂ.ಎಸ್.ಪಾಟೀಲ್ ನರಿಬೋಳ ತಿಳಿಸಿದರು.
ಈ ಕೂಡಲೇ ಸರ್ಕಾರವು ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಹುದ್ದೆಗಳನ್ನು ಹಾಗೂ ಆಡಳಿತಾತ್ಮಕ ಪ್ರಮುಖ ಹುದ್ದೆಗಳನ್ನು ನೀಡಬೇಕು. ಅಲ್ಲದೆ ಶಾಮನೂರ ಅವರಂಥ ಹಿರಿಯರ ಮಾತನ್ನು ಸರ್ಕಾರ ನಿರ್ಲಕ್ಷಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಎಲ್ಲರು ಮಠಾಧೀಶರು ಸೇರಿಕೊಂಡು ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಅಧಿಕಾರಿಗಳಿಗೆ ಜಾತಿ ಆಧಾರದ ಮೆಲೆ ಹುz್ದೆ ನೀಡಬಾರದು. ಆದರೆ. ಕಾರ್ಯಕ್ಷಮತೆ, ಯೋಗ್ಯತೆ ನೋಡಿಕೊಂಡು  ಹುದ್ದೆಗಳನ್ನು ನೀಡಬೇಕು. ಅನೇಕ ಘಟನೆಗಳಲ್ಲಿ ಲಿಂಗಾಯತರು ಎಂದು ಕಡೆಗಣಿಸಿ ದೂರವಿಡಲಾಗುತ್ತಿದೆ ಇದು ಸರಿಯಾದ ಕ್ರಮವಲ್ಲ ಎಂದು ಸರಡಗಿ ಶ್ರೀಗಳು ಹೇಳಿದರು.
 ಶಾಮನೂರರು ಲಿಂಗಾಯತ ಅಧಿಕಾರಿಗಳ ಪರ ಧ್ವನಿ ಎತ್ತಿz್ದÁರೆ. ಅವರಿಗೆ ಮಠಾಧೀಶರು ಹಾಗೂ  ಲಿಂಗಾಯತ ಸಮಾಜದವರು ಬೆಂಬಲಿಸುವುದು ಹೊಣೆಯಾಗಿದೆ. ಈ ಹಿಂದೆ  ಯಡಿಯೂರಪ್ಪನವರಿಗೆ ಅನ್ಯಾಯವಾದಾಗಲೂ ನಾಡಿನ ಮಠಾದೀಶರೆಲ್ಲರು ಅವರ ಪರ ನಿಂತು ಹೋರಾಟ ಮಾಡಿz್ದÉÃವೆ. ಈಗ ಲಿಂಗಾಯತ ಅಧಿಕಾರಿಗಳ ಪರ ನಿಲ್ಲುವುದು ಅನಿವಾರ್ಯವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವೀರಭದ್ರ ಶಿವಾಚಾರ್ಯರು, ಶರಣಯ್ಯಾ ಸ್ವಾಮಿ ಹಿರೆಮಠ ನೀಲೂರ, ಅಮರೇಶಗೌಡ ಪಾಟೀಲ್ ಸರಡಗಿ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net