ರಾಜಕೀಯ ಬೆರೆಸುವುದು ಬೇಡ

rcb
Published on

ಕೋಲಾರ: ವಿಜಯೋತ್ಸವ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟ ಸಹನಾ ಕುಟುಂಬಸ್ಥರ ಪರ ರಾಜ್ಯ ಸರ್ಕಾರ ಸೇರಿ ನಾವು ಇದ್ದೇವೆ. ಇಂತಹ ಘಟನೆ ನಡೆಯಬಾರದಿತ್ತು. ಆಕಸ್ಮಿಕವಾಗಿ ನಡೆದಿರುವ ಘಟನೆಗೆ ರಾಜಕೀಯ ಬೆರೆಸುವುದು ಸರಿಯಲ್ಲ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್​ ತಿಳಿಸಿದರು.

ಬೆಂಗಳೂರಿನಲ್ಲಿ ನಡೆದ ಆರ್​ಸಿಬಿ ಟ್ರೋಫಿ ವಿಜಯೋತ್ಸವ ವೇಳೆ ಮೃತಪಟ್ಟ ಸಹನ ಅಂತ್ಯಕ್ರಿಯೆ ಬಳಿಕ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿ, ಮಾತನಾಡಿದರು.

ಘಟನೆ ನಡೆಯಬಾರದಿತ್ತು ನಡೆದುಹೋಗಿದೆ. ತಂದೆ ತಾಯಿ ಇಷ್ಟು ವರ್ಷ ಬೆಳೆಸಿ ವಿದ್ಯಾಭ್ಯಾಸ ನೀಡಿ ಕುಟುಂಬಕ್ಕೆ ಆಸರೆಯಾಗುತ್ತಾಳೆ ಎನ್ನುವ ಸಮಸಯದಲ್ಲಿ ಅಕಸ್ಮಿಕವಾಗಿ ಘಟನೆ ನಡೆದು ಸಹನಾ ಸಾವನ್ನಪ್ಪಿದ್ದಾರೆ. ಈ ರೀತಿಯ ಘಟನೆ ನಡೆಯಬಾರದಿತ್ತು, ದು@ಖ ತಂದಿದೆ. ಯಾರದು ತಪ್ಪು ಅಂತ ಹೇಳೋಕೆ ಬಯಸೋದಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್​ ತೆಗೆದಾಗ ಅಭಿಮಾನಿಗಳು ಓಡುವಾಗ ಕಾಲ್ತುಳಿತ ಆಗಿದೆ ಎಂದು ಘಟನೆಯನ್ನು ವಿವರಿಸಿದರು. ಘಟನೆಗೆ ರಾಜಕೀಯ ಬೆರೆಸಬಾರದು: ಆಕಸ್ಮಿಕವಾಗಿ ನಡೆದ ಘಟನೆಗೆ ರಾಜಕೀಯ ಬೆರೆಸಬಾರದು. ಉದ್ದೇಶದಿಂದ ಯಾರು ಮಾಡಿಲ್ಲ. ವಿಜಯೋತ್ಸವಕ್ಕೆ ಹೆಚ್ಚಿನ ಜನ ಸೇರೋದಿಲ್ಲ ಎನ್ನುವ ನಿರೀಕ್ಷೆ ಇತ್ತು. ಆದರೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿಸೇರಿದ್ದರಿಂದ ನಿಯಂತ್ರಿಸಲು ಪೊಲೀಸರು ತಮ್ಮ ಕರ್ತವ್ಯ ಮಾಡಿದ್ದಾರೆ. ಆದರೂ ಮೂರು ಲಕ್ಷ ಜನ ಸೇರಿದ್ದಾಗ ಎಷ್ಟು ಜನ ಪೊಲೀಸ್​ ಹಾಕೋಕೆ ಆಗುತ್ತೆ ಎಂದು ಪ್ರಶ್ನಿಸಿದರು.

ಬಿಜೆಪಿಯಿಂದ ರಾಜಕೀಯ

ಬಿಜೆಪಿಯವರು ಈ ಘಟನೆಯನ್ನು ರಾಜಕೀಯ ಬೆರೆಸಲು ಮುಂದಾಗಿದ್ದಾರೆ. ಅದರೆ ಕರ್ನಾಟಕ ಕ್ರಿಕೆಟ್​ ಕಮಿಟಿ ರವರು ವಿಜಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು ಆರ್​.ಸಿ.ಬಿ ತಂಡವನ್ನು ಕರೆಸಿತ್ತು. ಆರ್​.ಸಿ.ಬಿ ತಂಡದಲ್ಲಿ ದೇಶದವರಲ್ಲದೆ ಹೊರದೇಶದವರು ಇದ್ದರೂ ಟ್ರೋಪಿ ಗೆದ್ದ ನಂತರ ಅವರು ಅವರ ದೇಶಕ್ಕೆ ಮರಳಿದರೆ ವಿಜಯೋತ್ಸವನ್ನು ಎಲ್ಲಾ ಆಟಗಾರರ ಒಟ್ಟಿಗೆ ಆಚರಿಸಲು ಸಾಧ್ಯವಾಗುದಿಲ್ಲ ಎಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೆ ಸರ್ಕಾರದಿಂದ ಬಸ್​ ವ್ಯವಸ್ಥೆಯೊಂದಿಗೆ ಬೆಂಬಲ ನೀಡಿದೆ ಎಂದು ತಿಳಿಸಿದರು.

ಎಂಎಲ್​ಸಿ ಅನಿಲ್​ಕುಮಾರ್​, ಮೈಲಾಂಡಹಳ್ಳಿ ಮುರಳಿ, ಸಹನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net