ಸಂಶೋಧನೆ ಮಾರಾಟದ ಸರಕಾಗದಿರಲಿ

Published on

ಚಿತ್ರದುರ್ಗ: ವಿಜ್ಞಾನ ಜನಸಾಮಾನ್ಯರ ನೆಮ್ಮದಿ ಕಾಪಾಡಬೇಕೇ ಹೊರತು ಮನುಕುಲದ ನಾಶಕ್ಕೆ ಬಳಕೆಯಾಗಬಾರದು ಎಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ.ಯಾದವರೆಡ್ಡಿ ಹೇಳಿದರು.

ವಿಜ್ಞಾನ ಕೇಂದ್ರ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಸಂಶೋಧನೆಗಳು ಪ್ರಾಣ ಉಳಿಸಬೇಕು. ಮಾರಾಟದ ವಸ್ತುಗಳಾಗಬಾರದು. ವಿಜ್ಞಾನವಿರುವುದು ಹಣ ಗಳಿಕೆಗಾಗಿ ಅಲ್ಲ, ಆದರೆ ವಿಜ್ಞಾನ ಬಾಂಬ್, ಅಣ್ವಸ್ತ್ರಗಳ ತಯಾರಿಕೆಗೆ ಬಳಕೆಯಾಗುತ್ತಿರುವುದು ನೋವಿನ ಸಂಗತಿ. ಅಹಂಕಾರ, ಪ್ರತಿಷ್ಠೆಗಾಗಿ ಯುದ್ಧ ಮಾಡುವ ದೇಶಗಳಿವೆೆ ಎನ್ನುವುದಾದರೆ ವಿಜ್ಞಾನ ಎತ್ತ ಸಾಗುತ್ತಿದೆ ಎಂದು ಪ್ರಶ್ನಿಸಿದರು.

ಉಪನ್ಯಾಸ ನೀಡಿದ ಕೇಂದ್ರದ ಕಾರ‌್ಯದರ್ಶಿ ಕೆ.ರಾಜ್‌ಕುಮಾರ್, ಎಲ್ಲರಲ್ಲೂ ವೈಜ್ಞಾನಿಕ ಪ್ರಜ್ಞೆ ಮೂಡಿಸುವುದು ವಿಜ್ಞಾನ ಕೇಂದ್ರದ ಉದ್ದೇಶವಾಗಿದೆ ಎಂದರು.

ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೇಗೌಡ ಮಾತನಾಡಿ ಬೆಳಕನ್ನು ಯಾರೂ ನೋಡಿಲ್ಲ. ಆದರೆ ಬೆಳಕಿನ ಪರಿಣಾಮವನ್ನು ನೋಡಬಹುದಾಗಿದೆ ಎಂದು ಸರ್ ಸಿ.ವಿ.ರಾಮನ್ ಸಾರಿದ್ದಾರೆಂದರು.

ಪ್ರಾಂಶುಪಾಲ ಪ್ರೊ.ಸಿದ್ದರಾಮ ಚನಗೊಂಡ ಅಧ್ಯಕ್ಷತೆ ವಹಿಸಿದ್ದರು. ಡಾ.ಡಿ.ನಾಗರಾಜ, ಡಾ.ವೈ.ಟಿ.ರವಿಕುಮಾರ್, ಎಚ್.ದಾದಖಲಂದರ್, ಒ.ಹಿಮಂತರಾಜು, ಪ್ರೊ.ಶೋಭಾ ದಳವಾಯಿ ಪ್ರಾರ್ಥಿಸಿದರು. ಡಾ.ರಮೇಶ್‌ಐನಳ್ಳಿ ಸ್ವಾಗತಿಸಿದರೆ, ಸುಧಾಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net