ಸೌಂದರ್ಯಕ್ಕಾಗಿ ತಾಯ್ತನ ಕಳೆದುಕೊಳ್ಳದಿರಿ

 ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಟರಿ ಸಂಸ್ಥೆ ವತಿಯಿಂದ ಗರ್ಭಿಣಿ ಮತ್ತು ಶಿಶು ಆರೋಗ್ಯ ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞೆ ಡಾ.ಮಧುರಾ ಪ್ರದೀಪ್ ತಾಯಂದಿರಿಗೆ ಶಿಶು ಆರೈಕೆ ಕುರಿತು ಮಾಹಿತಿ ನೀಡಿದರು. ಡಾ.ಅರ್ಜುನಕುಮಾರ್, ಡಾ. ಸೌಮ್ಯ, ಕೆ.ಎಚ್.ಮರಿಸ್ವಾಮಿ, ಎಸ್.ಕೆ. ಶಶಿಕುಮಾರ್ ಮತ್ತಿತರರಿದ್ದರು.
ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಟರಿ ಸಂಸ್ಥೆ ವತಿಯಿಂದ ಗರ್ಭಿಣಿ ಮತ್ತು ಶಿಶು ಆರೋಗ್ಯ ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞೆ ಡಾ.ಮಧುರಾ ಪ್ರದೀಪ್ ತಾಯಂದಿರಿಗೆ ಶಿಶು ಆರೈಕೆ ಕುರಿತು ಮಾಹಿತಿ ನೀಡಿದರು. ಡಾ.ಅರ್ಜುನಕುಮಾರ್, ಡಾ. ಸೌಮ್ಯ, ಕೆ.ಎಚ್.ಮರಿಸ್ವಾಮಿ, ಎಸ್.ಕೆ. ಶಶಿಕುಮಾರ್ ಮತ್ತಿತರರಿದ್ದರು.
Published on

ಕೆ.ಎಂ.ದೊಡ್ಡಿ: ತಾಯ್ತನ ಬಹಳ ಶ್ರೇಷ್ಠವಾದದ್ದು. ಅದು ಮತ್ತೊಮ್ಮೆ ಸಿಗುವುದಿಲ್ಲ. ಸೌಂದರ್ಯ ಉಳಿಸಿಕೊಳ್ಳಲು ತಾಯ್ತನ ಕಳೆದುಕೊಳ್ಳಬೇಡಿ ಎಂದು ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಅರ್ಜುನಕುಮಾರ್ ಸಲಹೆ ನೀಡಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಟರಿ ಸಂಸ್ಥೆ ವತಿಯಿಂದ ಗರ್ಭಿಣಿ ಮತ್ತು ಶಿಶು ಆರೋಗ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಯ್ತನದ ಅವಕಾಶ ಒಂದು ಬಾರಿ ಅಥವಾ ಎರಡು ಬಾರಿ ಸಿಗುತ್ತದೆ. ಮತ್ತೆ ತಾಯ್ತನ ಬರುವುದಿಲ್ಲ. ಗರ್ಭಿಣಿಯರು ತಮ್ಮ ಒಡಲಲ್ಲಿನ ಮಗುವನ್ನು 9 ತಿಂಗಳು ಸೂಕ್ಷ್ಮವಾಗಿ, ಜೋಪಾನವಾಗಿ ಕಾಪಾಡಲು ಉತ್ತಮ ಪೌಷ್ಟಿಕ ಆಹಾರ ಸೇವಿಸಬೇಕು. ಆಹಾರ ಸೇವನೆಯಲ್ಲಿ ಎಚ್ಚರ ವಹಿಸದಿದ್ದರೆ ಮಗುವಿನ ಆರೋಗ್ಯದಲ್ಲಿ ಏರುಪೇರಾಗಬಹುದು. ಹುಟ್ಟಿದ ನಂತರ ಹಲವು ಕಾಯಿಲೆಗಳಿಗೆ ತುತ್ತ್ತಾಗಬಹುದು. ಇವುಗಳನ್ನು ಗಮನದಲ್ಲಿಟ್ಟುಕೊಂಡು ಮೂಢನಂಬಿಕೆಗೆ ಜೋತು ಬೀಳದೆ ವೈದ್ಯರು ಹೇಳುವ ಆಹಾರ ಸೇವಿಸಿ ಎಂದು ಹೇಳಿದರು.

ಮಕ್ಕಳ ತಜ್ಞೆ ಡಾ.ಮಧುರಾ ಪ್ರದೀಪ್ ಮಾತನಾಡಿ, ಹೆರಿಗೆಯಾದ ಬಳಿಕ ತಾಯಿಯು ಅರ್ಧ ಗಂಟೆಯಲ್ಲಿ ಮಗುವಿಗೆ ಎದೆ ಹಾಲು ಕುಡಿಸಿದರೆ ಮಗುವಿನ ಆರೋಗ್ಯ ಉತ್ತ್ತಮವಾಗುವುದರ ಜತೆಗೆ ತಾಯಿ ಸಹ ಆರೋಗ್ಯದಿಂದಿರಬಹುದು ಎಂದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ರಸಾಯನಿಕಯುಕ್ತ ಆಹಾರ ನೀಡುವುದು ಹೆಚ್ಚಾಗಿದೆ. ಇವುಗಳಿಗೆ ಕಡಿವಾಣ ಹಾಕಿ ಸಾವಯವ ಆಹಾರ ನೀಡಿದರೆ ಮಕ್ಕಳ ಬೆಳವಣಿಗೆ ಉತ್ತಮವಾಗಿ ಆರೋಗ್ಯವಂತರಾಗಿರುತ್ತಾರೆ ಎಂದು ಸಲಹೆ ನೀಡಿದರು.

ಆಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆ ಅಧ್ಯಕ್ಷ ಎಸ್.ಕೆ. ಶಶಿಕುಮಾರ್ ಮಾತನಾಡಿದರು. ಪದಾಧಿಕಾರಿಗಳಾದ ಡಾ.ಸೌಮ್ಯಾ, ಕೆ.ಎಚ್. ಮರಿಸ್ವಾಮಿ, ಮರಿಚನ್ನೇಗೌಡ, ಕೆ.ಕುಮಾರರಾಜು, ಶ್ರೀನಿವಾಸ್, ಕುರಿಕೆಂಪನದೊಡ್ಡಿ ಶಿವಲಿಂಗೇಗೌಡ, ದೇವರಹಳ್ಳಿ ನಂದೀಶ್, ಮರಿಚನ್ನೇಗೌಡ, ಶಿವರಾಮೇಗೌಡ, ಶಿವಮ್ಮ ಶಿವಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net