ಈ ಬಾರಿ ಎಸ್ಸೆಸ್ಸೆಲ್ಸಿ ಮೊಬೈಲ್​ ನೋಡಬೇಡ ಎಂದಿದ್ದಕ್ಕೆ ಆತ್ಮಹತ್ಯೆ

Boy Suside
Published on

ಬ್ಯಾಡಗಿ: ಎಸ್ಸೆಸ್ಸೆಲ್ಸಿ ಇರುವುದರಿಂದ ಚನ್ನಾಗಿ ಓದು ಪದೇ ಪದೇ ಮೊಬೈಲ್​ ಬಳಸಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ವಿದ್ಯಾಥಿರ್ಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಇಸ್ಲಾಂಪುರ ಓಣಿಯಲ್ಲಿ ಮಂಗಳವಾರ ನಡೆದಿದೆ.

ಶಿಗ್ಗಾಂವಿ ತಾಲೂಕಿನ ಚಿಕ್ಕನೆಲ್ಲೂರ ಗ್ರಾಮದ ರುದ್ರೇಶ ಶಿವಪ್ಪ ಗಂಜಿಗಟ್ಟಿ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾಥಿರ್.

ಈತ ಪಟ್ಟಣದ ಇಸ್ಲಾಂಪುರ ಓಣಿಯಲ್ಲಿನ ಅಜ್ಜನ ಮನೆಯಲ್ಲಿದ್ದುಕೊಂಡು ಖಾಸಗಿ ಶಾಲೆಯಲ್ಲಿ ಓದುತ್ತಿದ್ದ. ಸೋಮವಾರ ರಾತ್ರಿ ಕುಟುಂಬದವರು ಎಸ್ಸೆಸ್ಸೆಲ್ಸಿ ಇರುವುದರಿಂದ ಈ ಬಾರಿ ಚನ್ನಾಗಿ ಓದಬೇಕು. ಮೊಬೈಲ್​ ಬಳಸಬೇಡ ಎಂದು ಬುದ್ಧಿವಾದ ಹೇಳಿದ್ದರು. ಇದರಿಂದ ಬೇಸರಗೊಂಡ ವಿದ್ಯಾಥಿರ್ ಮಂಗಳವಾರ ಬೆಳಗ್ಗೆ ಎದ್ದು ಚಹಾ ಮಾಡಿಕೊಡಲು ಕೇಳಿದ್ದಾನೆ. ಮನೆಯಲ್ಲಿ ಮೊದಲು ಮುಖ ತೊಳೆದುಕೊಂಡು ಬಾ, ಆಬಳಿಕ ಚಹಾ ಕೊಡುತ್ತೇವೆ ಎಂದಿದ್ದಾರೆ. ಆಗ ನೇರವಾಗಿ ರೂಮ್​ಗೆ ಹೋದ ವಿದ್ಯಾಥಿರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net