ಲಾಕ್ ಡೌನ್ ಬೇಡ - ಬಳ್ಳಾರಿಯಲ್ಲಿ ಸಚಿವ ಬಿ.ಶ್ರೀರಾಮುಲು ಹೇಳಿಕೆ

B Sriramulu Minister
Published on

ಬಳ್ಳಾರಿ: ಮೊದಲೇ ಜನರ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಇಂತಹ ಸಂದರ್ಭ ಲಾಕ್‌ಡೌನ್ ವಾಡುವುದರಿಂದ ಜನರಿಗೆ, ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ. ಹೀಗಾಗಿ ಲಾಕ್‌ಡೌನ್ ಬೇಡವೆಂದು ಸಿಎಂ ಬಳಿ ಅಭಿಪ್ರಾಯ ಹಂಚಿಕೊಂಡಿದ್ದೇನೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಎಲ್ಲಿ ಸೋಂಕು ಜಾಸ್ತಿಯಾಗುತ್ತಿದೆಯೋ ಆ ಜಿಲ್ಲೆಗಳಲ್ಲಿ ನೈಟ್ ಕರ್ಫೂ ವಿಸ್ತರಣೆಯಾಗಲಿ. ಆದರೆ, ಲಾಕ್‌ಡೌನ್ ಬೇಡವೆಂದು ಬಿಎಸ್‌ವೈ ಬಳಿ ಹೇಳಿದ್ದೇನೆ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ಮಹಾರಾಷ್ಟ್ರಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಿದೆ. ಚುನಾವಣೆ ಬಂದ ಮೇಲೆ ಕೋವಿಡ್ ಜಾಸ್ತಿಯಾಗಿದೆ ಎಂಬುದನ್ನು ನಾನೂ ಒಪ್ಪುವೆ. ಹೀಗಾಗಿ ಜನರಲ್ಲಿ ಕರೊನಾ ಕುರಿತು ಜಾಗೃತಿ ಮೂಡಿಸೋಣ ಎಂದರು.

ನೀತಿ ಹೇಳಿದವರಿಂದಲೇ ನಿಯಮ ಉಲ್ಲಂಘನೆ
ಕರೊನಾ ಕುರಿತು ಜನರಲ್ಲಿ ಅರಿವು ಮೂಡಿಸೋಣ ಎನ್ನುವ ಖುದ್ದು ಸಚಿವ ಶ್ರೀರಾಮುಲುರೇ ಜನರ ನಡುವೆ ವಾಸ್ಕ್ ಇಲ್ಲದೆ ಭಾಗಿಯಾಗುತ್ತಿದ್ದಾರೆ. ಒಂದೆಡೆ ನೀತಿ ಪಾಠ, ಇನ್ನೊಂದೆಡೆ ಕರೊನಾ ನಿಯಮ ಉಲ್ಲಂಸುವ ಮೂಲಕ ಅಪಹಾಸ್ಯಕ್ಕೆ ಈಡಾಗಿದ್ದಾರೆ. ಬಳ್ಳಾರಿ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಸಚಿವ ಶ್ರೀರಾಮುಲುರಿಂದ ಕ್ಯಾಂಪೇನ್ ಆರಂಭವಾಗಿದ್ದು, ಸಾವಿರಾರು ಜನರ ಮಧ್ಯೆ ಮಾಸ್ಕ್, ಸಾಮಾಜಿಕ ಅಂತರವಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ. ಲಾಕ್‌ಡೌನ್ ಬೇಡ, ಜಾಗೃತಿ ಮೂಡಿಸೋಣ ಎನ್ನುವ ಸಚಿವರು, ತಾವೇ ವಾಸ್ಕ್ ಹಾಕದೆ ಪ್ರಚಾರ ನಡೆಸುತ್ತಿರುವುದು ನಗರದಲ್ಲಿ ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net