

ಹರಪನಹಳ್ಳಿ: ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಜ್ಞಾನ ವೃದ್ಧಿಸಿಕೊಳ್ಳಬಹುದು ಎಂದು ಕೂಲಹಳ್ಳಿ ಗೋಣಿಬಸವೇಶ್ವರ ಮಠದ ಪೀಠಾಧಿಪತಿ ಪಟ್ಟದ ಚಿನ್ಮಯ ಸ್ವಾಮೀಜಿ ಹೇಳಿದರು.
ದೇವರ ತಿಮ್ಲಾಪುರ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಿರುವ ಎನ್ನೆಸ್ಸೆಸ್ ಶಿಬಿರದಲ್ಲಿ ಬುಧವಾರ ಮಾತನಾಡಿದರು. ವಿದ್ಯಾರ್ಥಿಗಳು ಕಾಲೇಜು ದಿನಗಳಲ್ಲಿ ಕಾಲಹರಣ ಮಾಡದೆ ಎನ್ನೆಸ್ಸೆಸ್ ಶಿಬಿರ, ಎನ್‌ಸಿಸಿ ಹಾಗೂ ಕ್ರೀಡೆಗಳಲ್ಲಿ ಪಾಲ್ಗೊಂಡು ದೈಹಿಕ ಸದೃಢತೆ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಬೇಕು ಎಂದರು.
ಪ್ರಾಚಾರ್ಯ ಡಾ.ಎಸ್.ಷಣ್ಮುಖನಗೌಡ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಜನರು ಯಾವ ರೀತಿ ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ ಎಂಬುದರ ಅರಿವು ಮೂಡುತ್ತದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಮುಗಿದ ನಂತರ ಉನ್ನತ ಹುದ್ದೆ ಪಡೆದಲ್ಲಿ ಹಳ್ಳಿಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಅನುಷಾ ಬಿ, ಪಿಡಿಒ ಟಿ.ಅಂಜಿನಪ್ಪ, ಪ್ರಮುಖರಾದ ಪವಿತ್ರಾ, ಎನ್.ಎಂ.ನಾಗರಾಜ್, ಹರಾಳು ಬುಳ್ಳಪ್ಪ, ಹುಚ್ಚರಾಯಪ್ಪ, ಬಸವರಾಜ್, ತಿಪ್ಪೇಸ್ವಾಮಿ ಗೊಂಚಿಗರ್, ಕೊಟ್ರೇಶ್, ವೀರೇಶ್, ಪುನೀತ್, ಮಲ್ಲೇಶಪ್ಪ , ಮಲ್ಲಿಕಾರ್ಜುನ್ ಇತರರಿದ್ದರು.