ರಾಷ್ಟ್ರ ನಾಯಕರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸದಿರಿ

Don't limit national leaders to one community.
ಬಬಲೇಶ್ವರ ತಾಲೂಕಿನ ಬೆಳ್ಳುಬ್ಬಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್​. ಅಂಬೇಡ್ಕರ್​ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು. ಅಂದಾನಯ್ಯ ಹಿರೇಮಠ, ಸಂಗಮೇಶ ಬಬಲೇಶ್ವರ, ಬಸವರಾಜ ದೇಸಾಯಿ, ಕಲ್ಲಪ್ಪ ಕೊಡಬಾಗಿ ಮತ್ತಿತರರಿದ್ದಾರೆ.
Published on

ವಿಜಯಪುರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್​. ಅಂಬೇಡ್ಕರ್​ ಮತ್ತು ಅಣ್ಣ ಬಸವಣ್ಣನವರ ಚಿಂತನೆಗಳು ಸಾರ್ವಕಾಲಿಕವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಬಬಲೇಶ್ವರ ತಾಲೂಕಿನ ಬೆಳ್ಳುಬ್ಬಿ ಗ್ರಾಮದಲ್ಲಿ ಸೋಮವಾರ ವಿಶ್ವರತ್ನ ಡಾ. ಬಿ.ಆರ್​. ಅಂಬೇಡ್ಕರ್​ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು.

ಬಸವಾದಿ ಶರಣರು ಜಗತ್ತಿನ ಪ್ರಥಮ ಸಂಸತ್ತು ಅನುಭವ ಮಂಟಪ ಸ್ಥಾಪಿಸಿ ಮಾನವೀಯತೆ ಮತ್ತು ಸಮಾನತೆ ಸಾರಿದರು. ಅಲ್ಲದೆ, ಸಮಾಜದಲ್ಲಿರುವ ಅಸ್ಪಶ್ಯತೆ, ಮೂಢನಂಬಿಕೆ ಹಾಗೂ ಅನಿಷ್ಠ ಪದ್ಧತಿ ಹೋಗಲಾಡಿಸಲು ಶ್ರಮಿಸಿದರು. ಬಸವಣ್ಣನವರು ತಮ್ಮ ಚಿಂತನೆಗಳನ್ನು ವಚನಗಳ ಮೂಲಕ ಸಮಾಜ ಸುಧಾರಣೆಗೆ ನಾಂದಿ ಹಾಡಿದ್ದಾರೆ. ಮಹನೀಯರ ಚಿಂತನೆಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಅವರ ಮಾರ್ಗದಲ್ಲಿ ಮುನ್ನಡೆದು ಭವ್ಯ ಭಾರತ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.

ಅಂಬೇಡ್ಕರ್​ ರಚಿಸಿದ ಸಂವಿಧಾನ ವಿಶ್ವ ಶ್ರೇಷ್ಠವಾಗಿದೆ. ಬಸವಾದಿ ಶರಣರ ವಚನಗಳ ಆಶಯಗಳು ಸಂವಿಧಾನದಲ್ಲಿವೆ. ಅಂಬೇಡ್ಕರ್​ ಬೇರೆಯಲ್ಲ, ಬಸವಣ್ಣ ಬೇರೆಯಲ್ಲ. ಇವರೆಲ್ಲರ ಚಿಂತನೆಗಳು ಒಂದೇ ಆಗಿವೆ. ರಾಷ್ಟ್ರ ನಾಯಕರಾದ ಅಂಬೇಡ್ಕರ್​, ಬಸವಣ್ಣ, ಕಿತ್ತೂರು ರಾಣಿ ಚನ್ನಮ್ಮ, ಅಕ್ಕಮಹಾದೇವಿ, ಸಂಗೊಳ್ಳಿ ರಾಯಣ್ಣನಂತಹ ಮಹನೀಯರು ಸಮಾಜದ ಸ್ವತ್ತು. ರಾಷ್ಟ್ರ ನಾಯಕರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದರು.

ಅಂದಾನಯ್ಯ ಹಿರೇಮಠ, ಗುರುಬಸಯ್ಯ ಕಟಗೇರಿಮಠ, ರಾಜ್ಯ ಬಾಲವಿಕಾಸ ಅಕಾಡೆಮಿ ಅಧ್ಯ ಸಂಗಮೇಶ ಬಬಲೇಶ್ವರ, ಜಿ.ಪಂ. ಮಾಜಿ ಅಧ್ಯ ಬಸವರಾಜ ದೇಸಾಯಿ, ಜಿ.ಪಂ. ಮಾಜಿ ಸದಸ್ಯ ಕಲ್ಲಪ್ಪ ಕೊಡಬಾಗಿ, ಅಭಿಷೇಕ ಚಕ್ರವರ್ತಿ, ಡಾ. ಕೆ.ಎಚ್​. ಮುಂಬಾರೆಡ್ಡಿ, ಡಿ.ಎಂ. ಚಲವಾದಿ, ಡಾ. ಕೌಸರ ಅತ್ತಾರ, ವಿ.ಎಚ್​. ಬಿದರಿ, ಮಲ್ಲು ದಳವಾಯಿ, ಶಂಕರ ಹಾದಿಮನಿ, ರಮೇಶ ಬಸೆಟ್ಟಿ, ಶ್ರೀಕಾಂತ ಪತ್ತಾರ, ಸಿದ್ದಗೊಂಡ ನ್ಯಾಮಗೌಡ, ಕಲ್ಲಪ್ಪ ಕೊಡಬಾಗಿ, ರಮೇಶ ಹಾದಿಮನಿ, ಬಸವರಾಜ ಜೈನಾಪುರ, ದೇವೇಂದ್ರ ಹಾದಿಮನಿ, ಹಣಮಂತ ದೊಡಮನಿ, ಮಳೆಪ್ಪ ಬಸೆಟ್ಟಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net