ನವರಾತ್ರಿ ಪಾವಿತ್ರ್ಯತೆ ಹಾಳುಗೆಡವಬೇಡಿ

New PM 1 New
Published on

ಹುಬ್ಬಳ್ಳಿ : ನವರಾತ್ರಿ ಅಂಗವಾಗಿ ಕೆಲವು ಸಂಘಟನೆಗಳು ದಾಂಡಿಯಾ, ಗರಬಾ ಮತ್ತಿತರ ಸಾಂಸ್ಕೃತಿಕ ನೃತ್ಯಗಳನ್ನು ವ್ಯಾಪಾರಕ್ಕೆ ಬಳಸಿಕೊಳ್ಳುತ್ತಿದ್ದು, ತಕ್ಷಣ ಕೈಬಿಡಬೇಕು ಎಂದು ವಿಶ್ವ ಹಿಂದು ಪರಿಷತ್ ಒತ್ತಾಯಿಸಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್​ನ ಕರ್ನಾಟಕ ಉತ್ತರ ಪ್ರಾಂತದ ಉಪಾಧ್ಯಕ್ಷ ಕೆ. ಗೋವರ್ಧನರಾವ್, ನವರಾತ್ರಿ ಆಚರಣೆ ಹಿಂದುಗಳ ಹಬ್ಬ. ಹಿಂದುಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉಚಿತ ಅವಕಾಶ ನೀಡಬೇಕು. ಬೇರೆಯವರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಹೇಳಿದರು.

ಹೊಸ ಕೋರ್ಟ್ ಕಟ್ಟಡ, ನೆಹರು ಮೈದಾನ ಹಾಗೂ ಇನ್ನಿತರೆಡೆ ದಾಂಡಿಯಾ, ಗರಬಾಗಳಿಗೆ ಟಿಕೆಟ್ ಆಯೋಜಿಸಲಾಗಿದೆ. ಈ ಸಾಂಸ್ಕೃತಿಕ ನೃತ್ಯಗಳನ್ನು ವ್ಯಾಪಾರೀಕರಣಗೊಳಿಸಬಾರದು ಎಂದರು.

ನವರಾತ್ರಿ ಆಚರಣೆ ನೆಪದಲ್ಲಿ ಮೋಜು, ಮಸ್ತಿಗೆ ಅವಕಾಶ ನೀಡಬಾರದು. ನವರಾತ್ರಿಯ ಪಾವಿತ್ರತೆ ಭಂಗ ಆಗದಂತೆ ಆಚರಣೆ ಕೈಗೊಳ್ಳಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಪರಿಷತ್​ನ ಗಣಪತಿ ಸ್ವಾದಿ, ರಘು ಯಲ್ಲಕ್ಕನವರ, ವೀಣಾ ಹೆಗಡೆ, ರಮೇಶ ಕದಂ, ಬಸವರಾಜ ಸೋಗೂರು ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net