

ಸೋಮವಾರಪೇಟೆ: ಗಣೇಶೋತ್ಸವ ಆಚರಣಾ ಸಮಿತಿಯ ಪೂರ್ವಭಾವಿ ಸಭೆ ಶುಕ್ರವಾರ ಡಿವೈಎಸ್‌ಪಿ ಗಂಗಾಧರಪ್ಪ ಅವರ ನೇತೃತ್ವದಲ್ಲಿ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿತ್ತು.
ಬಾಲಗಂಗಾಧರನಾಥ್ ತಿಲಕ್ ಅವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಗಣಪತಿ ಹಬ್ಬವನ್ನು ಆಚರಣೆಗೆ ತಂದರು. ಅಂದು ಭಜನೆ, ಸಂಗೀತ, ನಾಟಕ ಮಾಡುತ್ತ ಯುವಕರನ್ನು ಒಗ್ಗೂಡಿಸುತ್ತಿದ್ದರು. ಈಗ ಎಲ್ಲವೂ ಬದಲಾಗುತ್ತಿದ್ದು, ಶ್ರದಾ-್ಧಭಕ್ತಿಗೆ ಹೆಚ್ಚಿನ ಆದ್ಯತೆ ಸಿಗುವಂತಾಗಬೇಕು. ಮೋಜು ಮಸ್ತಿಗೆ ಅವಕಾಶ ಮಾಡಕೊಡಬಾರದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಮಿತಿ ಪದಾಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಡಿವೈಎಸ್‌ಪಿ ಕಿವಿಮಾತು ಹೇಳಿದರು.
ಗಣಪತಿಯನ್ನು ವಿಸರ್ಜಿಸುವ ಸಂದರ್ಭ ಸಮಯ ಮತ್ತು ಶಬ್ದದತ್ತ ಮುಖ್ಯವಾಗಿ ಗಮನಹರಿಸಬೇಕು. ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ವಾದ್ಯಗೋಷ್ಠಿಗೆ ರಾತ್ರಿ 11, ಡಿ.ಜೆ ಗೆ ರಾತ್ರಿ 10 ಗಂಟೆವರೆಗೆ ಮಾತ್ರ ಅವಕಾಶವಿರುತ್ತದೆ. ವಿಸರ್ಜನೆ ವೇಳೆ ಸಮಸ್ಯೆಗಳು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.
ಇನ್ಸ್‌ಪೆಕ್ಟರ್ ಮುದ್ದು ಮಾದೇವ್, ಸಬ್‌ಇನ್‌ಸ್ಪೆಕ್ಟರ್‌ಗಳಾದ. ಗೋಪಾಲ್, ರವಿ, ಶಿವಲಿಂಗ, ವಿವಿಧ ಆಚರಣಾ ಸಮಿತಿಯ ಪದಾಧಿಕಾರಿಗಳು ಇದ್ದರು.