ಕಟ್ಟಡ ನಿರ್ವತೃಗಳ ಕೊಂಡಿ ಕಳಚದಿರಲಿ

h19-engineers day
Published on

ಹುಬ್ಬಳ್ಳಿ: ಮಾಲೀಕರು, ಯೋಜನಕರು, ವಿನ್ಯಾಸಕಾರರು ಮತ್ತು ಕಾರ್ಯನಿರ್ವಾಹಕರು ಸದೃಢ ಕಟ್ಟಡದ ನಾಲ್ಕು ಕೊಂಡಿಗಳು. ಇದರಲ್ಲಿ ಒಬ್ಬರು ಕಾರ್ಯಕ್ಷಮತೆ ಮರೆತರೆ ಕಟ್ಟಡದ ಗುಣಮಟ್ಟ ಕುಸಿಯಲಿದೆ ಎಂದು ಖ್ಯಾತ ಇಂಜಿನಿಯರ್ ಆರ್.ವಿ. ನಾಗಮೂಲೆ ಹೇಳಿದರು.

ನಗರದ ಗೋಕುಲ ರಸ್ತೆಯ ಕೆಎಲ್​ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 56ನೇ ಅಭಿಯಂತರರ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಚಾರ್ಯ ಡಾ. ಶರದ್ ಜೋಶಿ ಮಾತನಾಡಿ, ನಮ್ಮ ಜೀವಿತಾವಧಿಯಲ್ಲಿ ಈಗಾಗಲೇ ಇರುವುದಕ್ಕಿಂತ ನಾವು ಮತ್ತಷ್ಟು ಪರಿಸರವನ್ನು ಹದಗೆಡಿಸುವುದಿಲ್ಲ ಎಂಬ ಜವಾಬ್ದಾರಿ ಹೊತ್ತುಕೊಳ್ಳಬೇಕು. ಪರಿಸರ ಸ್ನೇಹಿಯಾಗಿ ಎಲ್ಲರೂ ಬದುಕಬೇಕು ಎಂದರು.

ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ರಾಜಶೇಖರ ಲದ್ದಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಪ್ರಸ್ತುತದ ಅಗತ್ಯಗಳನ್ನು ಪೂರೈಸಿಕೊಳ್ಳಬೇಕು. ಆದರೆ ಪರಿಸರ ವಿರೋಧಿಯಾಗಿರಬಾರದು. ನೈಸರ್ಗಿಕ ಸಂಪನ್ಮೂಲವನ್ನು ಅನುಭವಿಸಬೇಕೇ ಹೊರತು ಹಾಳು ಮಾಡಬಾರದು ಎಂದು ಸಲಹೆ ನೀಡಿದರು.

ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲಿಸಲಾಯಿತು.

ಮಹಾವಿದ್ಯಾಲಯದ ಶೈಕ್ಷಣಿಕ ಡೀನ್ ಡಾ. ಮನು ಟಿ.ಎಂ., ಜಿಮಖಾನ ನಿರ್ದೇಶಕ ಡಾ. ಮಹಾಂತೇಶ ಸಜ್ಜನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net