

ಹುಕ್ಕೇರಿ: ರಾಜಕೀಯರಹಿತ ಆಡಳಿತದ ಮೂಲಕ ರೈತರ ಅಭಿವೃದ್ಧಿಗೆ ಶ್ರಮಿಸಬೇಕು. ದೇಶದಲ್ಲ್ಲಿ ಸಹಕಾರಿ ತತ್ತ್ವದಡಿ ವಿದ್ಯುತ್ ಪೂರೈಸುವ ಏಕೈಕ ಸಂಸ್ಥೆಯಾದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಬೆಳವಣಿಗೆಗೆ ಸಿಬ್ಬಂದಿ ಗುಣಮಟ್ಟದ ಸೇವೆಯೂ ಮುಖ್ಯ ಎಂದು ಸಂಘದ ಮಾರ್ಗದರ್ಶಕ ರಮೇಶ ಕತ್ತಿ ಹೇಳಿದರು.
ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಈಚೆಗೆ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಮೂರು ದಶಕಗಳಿಂದ ನಮ್ಮ ಮಾರ್ಗದರ್ಶನದಲ್ಲಿದ್ದ ತಾವು ಕೇವಲ ೩ ತಿಂಗಳು ಬೇರೆಯವರ ಆಡಳಿತದಲ್ಲಿ ಸೌಜನ್ಯರಹಿತ ವರ್ತನೆ ಗಮನಿಸಿದ್ದೀರಿ. ಅವರಿಗೂ ನಮಗೂ ಇರುವ ಸೇವಾ ಮನೋಭಾವದ ವ್ಯತ್ಯಾಸ ಗಮನಿಸಿದ ಸಂಘದ ಸದಸ್ಯರು ನಮ್ಮನ್ನು ಬೆಂಬಲಿಸಿದ್ದಾರೆ. ಕಾರಣ ತಾಲೂಕಿನ ಜನರು ಮತ್ತು ಗ್ರಾಹಕರ ನಿರೀಕ್ಷೆಗೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದರು.
ಸಂಘದ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಾಟೀಲ, ಸ್ಥಾನಿಕ ಅಭಿಯಂತ ನೇಮಿನಾಥ ಖೆಮಲಾಪುರೆ, ಅಭಿಯಂತರರಾದ ಉದಯ ಮಗದುಮ್ಮ, ಎನ್.ಎಸ್.ಸರದೇಸಾಯಿ, ಡಿ.ಎಸ್.ಘಸ್ತಿ, ವಿನೋದ ಚಂದಪ್ಪಗೋಳ, ಬಿ.ಎಂ.ಮಗದುಮ್ಮ, ವಿನಾಯಕ ರಾಮದುರ್ಗೆ, ಎನ್.ಎಂ.ಮಗದುಮ್ಮ, ಮಲ್ಲಿಕಾರ್ಜುನ ಹೆಬ್ಬಾಳೆ, ಮನೋಜ ಕರಾಡೆ, ಡಿ.ಎಸ್.ದೊಡಗನ್ನವರ, ಅಕೌಂಟ್ಸ್ ಆಫೀಸರ್ಎ ಸ್.ಎನ್.ಹಿರೇಮಠ, ಪ್ರಭಾರಿ ವ್ಯವಸ್ಥಾಪಕ ಡಿ.ಎಸ್.ನಾಯಿಕ, ಬಸವರಾಜ ವಾಜಂತ್ರಿ, ಸುನೀಲ ಗಡ್ಡಿ, ಸಂದೀಪ ಕುಲಕರ್ಣಿ, ಭರತ ಮಲಗೌಡನವರ ಇತರರಿದ್ದರು.