ಅಮಾಯಕರ ಬಲಿ ಪಡೆದವರ ಬಿಡಬೇಡಿ

Mask Attack
ಮಸ್ಕಿಯಲ್ಲಿ ಮುಸ್ಲಿಮರು ಮೌನ ಮೆರವಣಿಗೆ ನಡೆಸಿದರು. ಮುಸ್ಲಿಂ ಪಂಚ್ ಕಮಿಟಿ ಅಧ್ಯಕ್ಷ ಅಬ್ದುಲ್ ಅಜೀಜ್, ಅಬ್ದುಲ್ ಗನಿ, ಜಿಲಾನಿ ಖಾಜಿ, ಮಸೂದ್, ಪಾಷಾ ಶಬ್ಬೀರ್ ಚೌದ್ರಿ, ಅಜ್ಮೀರ್ ಹಲಪುಡಿ, ಅಜ್ಜು ಮೆಕ್ಯಾನಿಕ್, ಚಾಂದ್ ಸೇಡ್ಮೀ, ರಾಜಾ ನದಾಫ್, ಹುಸೇನ್, ಖಲೀಲ್ ಸೇಡ್ಮೀ, ರಿಯಾಜ್ ಖಾಜಿ ಇತರರಿದ್ದರು.
Published on

ಮಸ್ಕಿ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಪಟ್ಟಣದಲ್ಲಿ ಮುಸ್ಲಿಂ ಪಂಚ್ ಕಮೀಟಿಯಿಂದ ಮೌನ ಮೆರವಣಿಗೆ ನಡೆಸಲಾಯಿತು.

ಜಾಮೀಯಾ ಮಸೀದಿ ಬಳಿ ಜಮಾಯಿಸಿದ ನೂರಾರು ಮುಸ್ಲಿಮರು ಮೋಂಬತ್ತಿ ಬೆಳಕಿನಲ್ಲಿ ಡಾ.ಖಲೀಲ್ ವೃತ್ತ, ಪುರಸಭೆ ಕ್ರಾಸ್, ಮುಖ್ಯರಸ್ತೆ ಮೂಲಕ ಹಳೇ ಬಸ್ ನಿಲ್ದಾಣ ಬಳಿಯ ಡಾ. ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿದರು.

ಈ ವೇಳೆ ಕಮೀಟಿ ಪ್ರಮುಖರಾದ ಅಬ್ದುಲ್ ಗನಿ, ಜಿಲಾನಿ ಖಾಜಿ, ಮಸೂದ್ ಪಾಷಾ ಮಾತನಾಡಿ, ಭಯೋತ್ಪಾದಕರು ಅಮಾಯಕ ಜನರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿರುವುದು ಖಂಡನೀಯ. ಪ್ರವಾಸಿಗರ ಬಲಿ ಪಡೆದ ಉಗ್ರರನ್ನು ಬಿಡಬಾರದು ಎಂದು ಆಗ್ರಹಿಸಿದರು. ಬಳಿಕ ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.

ಕಮೀಟಿ ಅಧ್ಯಕ್ಷ ಅಬ್ದುಲ್ ಅಜೀಜ್, ಪುರಸಭೆ ಸದಸ್ಯ ಶಬ್ಬೀರ್ ಚೌದ್ರಿ, ಮುಖಂಡರಾದ ಅಜ್ಮೀರ್ ಹಲಪುಡಿ, ಅಜ್ಜು ಮೆಕಾನಿಕ್, ಚಾಂದ್ ಸೇಡ್ಮೀ, ರಾಜಾ ನದಾಫ್, ಹುಸೇನ್, ಖಲೀಲ್ ಸೇಡ್ಮೀ, ರಿಯಾಜ್ ಖಾಜಿ, ಖದೀರ್ ಚೌದ್ರಿ, ರಜಾಕ್, ನೂರ್ ಮೌಲಾನಾ, ಆದಂ ಹಾಜಿ, ನಬೀಸಾಬ್ ಬಿದರಕೋಟ, ಶಫಿ ಶೇರು, ಖಾಜಾ ಶಿಕಾರಿ, ನಿಸಾರ್ ಅಹ್ಮದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net