

ಆನೇಕಲ್ : ಪರಿಸರ ಹಾಳು ಮಾಡಿ ನಮ್ಮ ಎದೆಗೆ ನಾವೇ ಮೊಳೆ ಹೊಡೆದುಕೊಳ್ಳುತ್ತಿದ್ದೇವೆ ಎಂದು ವಲಯ ಅರಣ್ಯ ಅಧಿಕಾರಿ ಚಂದಾಪುರ ಪ್ರಶಾಂತ್ ಕಳವಳ ವ್ಯಕ್ತಪಡಿಸಿದರು. ಆನೇಕಲ್ ವಿಧಾನಸಭಾ ೇತ್ರದ ಕಸಾಪ ವತಿಯಿಂದ ಮುತ್ತಾನಲ್ಲೂರಿನ ನೇತಾಜಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಮನುಷ್ಯ ತನ್ನ ಅಹಂಕಾರಕ್ಕಾಗಿ ಮರಗಳನ್ನು ಕಡಿದು ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದಾನೆ. ಅತಿ ಶ್ರೀದಲ್ಲಿ ಮನುಕುಲ ವಿನಾಶ ಹೊಂದುವ ಮುನ್ಸೂಚನೆಯಿದೆ. ಅಪರೂಪವಾಗಿ ಮರಿ ಹಾಕುವ ಹುಲಿಗಳನ್ನು ಕೊಂದು ಪ್ರಾಣಿ ಸಂಕುಲವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾನೆ. ಸಂಪನ್ಮೂಲವನ್ನು ಪುನರ್ ಬಳಕೆ ಮಾಡಿ ಪ್ರಕೃತಿಗೆ ಸಹಾಯ ಮಾಡಿ ಮಾನವೀಯತೆ ತೋರಬೇಕಾಗಿದೆ ಎಂದು ಹೇಳಿದರು.
ಗ್ರಾಪಂ ಮಾಜಿ ಅಧ್ಯೆ ತೇಜಸ್ವಿನಿ ಶ್ರೀನಿವಾಸ್ ರೆಡ್ಡಿ ಮಾತನಾಡಿ, ಇರುವುದು ಒಂದು ಭೂಮಿ. ಇದನ್ನು ಕಾಪಿಟ್ಟುಕೊಂಡು ಪಂಚಭೂತಗಳನ್ನು ಗೌರವಿಸಿದಾಗ ಮನುಷ್ಯನ ಬದುಕು ಪಾವನವಾಗುತ್ತದೆ. ಪರಿಸರ ಉಳಿಸಿದಾಗ ಮಾತ್ರ ಮನುಕುಲ ಉಳಿಯುತ್ತದೆ ಎಂಬ ಸತ್ಯವನ್ನು ಅರಿತು ಬಾಳಬೇಕಿದೆ ಎಂದರು.
ಪಂಚಾಯಿತಿ ಸದಸ್ಯರಾದ ಜಯರಾಂ ಮಾತನಾಡಿ, ಮಾನವೀಯತೆ ಮರೆತು ಬಾಂಬ್ಗಳನ್ನು ತಯಾರಿಸಿಕೊಂಡು ಯುದ್ಧಗಳಲ್ಲಿ ಮಗ್ನರಾಗಿದ್ದಾರೆ. ಇದೇ ಬಹುದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಂಡು ಪ್ರಪಂಚ ನನ್ನಿಂದಲೇ ನಡೆಯಬೇಕು ಎನ್ನುವವರಿಗೆ ಪರಿಸರದ ಅಗತ್ಯವಿಲ್ಲ. ವಿದ್ಯಾರ್ಥಿಗಳಿಗೆ ಮರ ಗಿಡ ಪ್ರಾಣಿ ಪಯ ಬಗ್ಗೆ ಜಾಗೃತಿ ಮೂಡಿಸಿದಾಗ ಸುಧಾರಣೆ ಕಾಣಬಹುದಾಗಿದೆ ಎಂದು ಹೇಳಿದರು. ಶಾಮಣ್ಣ ಸ್ವಾಮೀಜಿ, ರಾಮಣ್ಣ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಂಖಡ ರಾಮಚಂದ್ರ ರೆಡ್ಡಿ, ಶಾಲೆಯ ಪ್ರಧಾನ ಕಾರ್ಯದರ್ಶಿ ರಾಧಮ್ಮ, ನಿರಹಂಕಾರಿ ಫೌಂಡೇಶನ್ನ ಶರ್ಮಿಳಾ ಸಿರಿ, ಸಂಜೀವಿನಿ ಒಕ್ಕೂಟದ ತೇಜಸ್ವಿನಿ ಶ್ರೀನಿವಾಸ್ ರೆಡ್ಡಿ, ಮಾಜಿ ಅಧ್ಯಕ್ಷ ಸಿ.ಆರ್. ಲಕ್ಷ$್ಮಣ್, ಹಿರಿಯ ಹೋರಾಟಗಾರ ಡಾ.ಎಂ.ಬಸಪ್ಪ ರೆಡ್ಡಿ ಸೇರಿ ಹಲವರನ್ನು ಸನ್ಮಾನಿಸಲಾಯಿತು.
ಮುತ್ತಾನಲ್ಲೂರು ಗ್ರಾಪಂ ಸದಸ್ಯರಾದ ಎಸ್.ಕೆ.ಗೌರೀಶ್, ನಾಗರಾಜಪ್ಪ, ಶಾಲೆಯ ನಿರ್ದೇಶಕರಾದ ಎನ್.ಚಂದ್ರ ಬಾಬು, ವೆಂಕಟಸ್ವಾಮಿ ರೆಡ್ಡಿ, ಪರಮೇಶ್ವರ್, ಮುಖ್ಯಶಿಕ್ಷಕರಾದ ಗುಡ್ಡಹಟ್ಟಿ ರಾಮಸ್ವಾಮಿ, ಪರಮೇಶ್, ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ವಾಣಿ ಪ್ರಕಾಶ್, ಶಿಕ್ಷಕರಾದ ಶ್ರೀದೇವಿ, ಪ್ರಕಾಶಪ್ಪ, ಗೀತಾ, ಕನ್ನೇಗೌಡ, ಅಂಬಿಕಾ, ರವಿ, ಕುಮಾರ್, ರಾಜಣ್ಣ, ಮೂರ್ತಿ, ಶಂಕರಪ್ಪ, ವ್ಯಾಪಾರಿ ನಾರಾಯಣ್, ಕಸಾಪ ಅಧ್ಯಕ್ಷ ಆದೂರು ಪ್ರಕಾಶ್, ಅಪ್ಸರ್ ಆಲಿಖಾನ್ ಮೊದಲಾದವರು ಇದ್ದರು.