ವಿಂಡ್ ಫ್ಯಾನ್ ಅಳವಡಿಕೆಗೆ ಅನುಮತಿ ನೀಡಿದಿರಿ

lng win
ಲಿಂಗಸುಗೂರಿನಲ್ಲಿ ಎಸಿ ಕಚೇರಿ ಎಫ್‌ಡಿಸಿ ಅನುಪಮಾ ಸಿಂಗ್‌ಗೆ ದಲಿತ ಸಂಘರ್ಷ ಸಮಿತಿ (ಭೀಮವಾದ) ಮನವಿ ಸಲ್ಲಿಸಿತು. ದಸಂಸ ತಾಲೂಕು ಸಂಚಾಲಕ ಯಂಕಪ್ಪ ಚಿತ್ತಾಪುರ, ನಾಗರಾಜ ಹಾಲಬಾವಿ, ಯಮನಪ್ಪ ಸರ್ಜಾಪುರ, ಸೋಮಣ್ಣ ಇತರರಿದ್ದರು.
Published on

ಲಿಂಗಸುಗೂರು: ತಾಲೂಕಿನ ವಿವಿಧ ಗ್ರಾಪಂಗಳ ವ್ಯಾಪ್ತಿಯಲ್ಲಿ ವಿಂಡ್ ಪವರ್ ಫ್ಯಾನ್‌ಗಳನ್ನು ಅಳವಡಿಸಲು ಅನುಮತಿ ನೀಡಬಾರದೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಭೀಮವಾದ)ಯಿಂದ ಎಸಿ ಕಚೇರಿ ಎಫ್‌ಡಿಸಿ ಅನುಪಮಾ ಸಿಂಗ್‌ಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಮುದಗಲ್ ವ್ಯಾಪ್ತಿಯ ಹೂನೂರು, ಆಮದಿಹಾಳ, ಬನ್ನಿಗೋಳ, ಕಾಚಾಪುರ, ನಾಗಲಾಪುರ ಸೇರಿದಂತೆ ವಿವಿಧ ಗ್ರಾಪಂಗಳಿಗೆ ಒಳಪಡುವ ಗ್ರಾಮಗಳಲ್ಲಿ ಕಡಿಮೆ ದರದಲ್ಲಿ ರೈತರಿಂದ ಭೂಮಿ ಖರೀದಿಸಿ ಗದಗ ವಿಂಡೋ ಆ್ಯಂಡ್ ಇಂಟೆಕ್ ಸುಲೋಚನಾ ಕಂಪನಿ ವಿಂಡ್ ಫ್ಯಾನ್ ಅಳವಡಿಸುತ್ತಿದೆ. ಇದರಿಂದ ಜಮೀನಿನ ಬದುಗಳು ಮತ್ತು ಹೊಲದ ರಸ್ತೆ, ಗಿಡ ಮರಗಳು ನಾಶಗೊಂಡು ರೈತರು ತೊಂದರೆಗೆ ಒಳಪಡಲಿದ್ದಾರೆ.

ರೈತರ ಹಿತದೃಷ್ಟಿಯಿಂದ ವಿಂಡ್ ಫ್ಯಾನ್‌ಗಳ ಅಳವಡಿಕೆಗೆ ಅನುಮತಿ ನೀಡಬಾರದು. ನಿರ್ಲಕ್ಷಿಸಿದರೆ ತೀವ್ರ ಹೋರಾಟ ನಡೆಸಲಾಗುವುದೆ ಎಂದು ಎಚ್ಚರಿಸಿದರು. ದಸಂಸ ತಾಲೂಕು ಸಂಚಾಲಕ ಯಂಕಪ್ಪ ಚಿತ್ತಾಪುರ, ನಾಗರಾಜ ಹಾಲಬಾವಿ, ಯಮನಪ್ಪ ಸರ್ಜಾಪುರ, ಸೋಮಣ್ಣ, ವೆಂಕಟೇಶ ನವಲಿ, ಮಲ್ಲನಗೌಡ, ದೇವಪ್ಪ ಪಂಚಾಳ, ರಾಜು ಭೂಪುರ, ಬಸನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net