

ಸರ್ಜಾಪುರ : ಬೆಂಗಳೂರು ಬಿಜಿನೆಸ್ ಕಾರಿಡಾರ್ ರಸ್ತೆ ಹಾದು ಹೋಗುವ 73 ಹಳ್ಳಿಗಳ ಗ್ರಾಮಗಳ ರೈತರನ್ನು ಬಿಡಿಎ ಸಂಧಾನ ಸೂತ್ರ ಸಭೆಗಳಿಗೆ ಆಹ್ವಾನಿಸಿದ್ದು, ರೈತರು ಹಾಜರಾಗಿ ವಿರೋಧ ವ್ಯಕ್ತ ಪಡಿಸಬೇಕು ಮತ್ತು ಹೊಸ ಭೂಸ್ವಾಧಿನ ಕಾಯ್ದೆ 2013ರಂತೆ ಪರಿಹಾರ ಮತ್ತು ಮರುವಸತಿ ನೀಡಬೇಕು. ಇಲ್ಲದಿದ್ದಲ್ಲಿ, ಸದರಿ ಜಮೀನುಗಳಿಗೆ ಎನ್ಒಸಿ ಕೊಡಲು ಆಗ್ರಹಿಸಬೇಕೆಂದು ಪೆರಿೆರಲ್ ರಿಂಗ್ ರೋಡ್ ರೈತ ಹಾಗೂ ನಿವೇಶನದಾರರ ಸಂದ ಅಧ್ಯ ಮಾವಳ್ಳಿಪುರ ಬಿ.ಶ್ರೀನಿವಾಸ್ ಹೇಳಿದರು.
ಸರ್ಜಾಪುರ ರಸ್ತೆಯ ಸೂಲಿಕುಂಟೆ ಕನ್ವೆನ್ಷನ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಿಆರ್ಆರ್ ರೈತ ಹಾಗೂ ನಿವೇಶನದಾರರ ಸಂದ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾನೂನು ಹೋರಾಟವನ್ನು ತೀವ್ರಗೊಳಿಸಬೇಕು. ಕಳೆದ ಎರಡು ತಿಂಗಳಿಂದೀಚೆಗೆ ಬಿಡಿಎ ಅಧಿಕಾರಿಗಳು, ಕೆಲ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ದಲ್ಲಾಳಿಗಳು, ರೈತರು ಮತ್ತು ನಿವೇಶನದಾರರನ್ನು ಬೆದರಿಸಿ ಸುಳ್ಳು ಭರವಸೆ ನೀಡಿ ಸಂಧಾನಿತ ಸೂತ್ರ ಪತ್ರಕ್ಕೆ ಬಲವಂತವಾಗಿ ಸಹಿ ಮಾಡಿಸಿಕೊಳ್ಳಲು ಮುಂದಾಗಿರುವುದು ಗಮನಕ್ಕೆ ಬಂದಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ನೂರಾರು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಹೀಗಿರುವಾಗ ಸಂಧಾನ ಸೂತ್ರ ಪ್ರಕ್ರಿಯೆ ನಡೆಸುತ್ತಿರುವ ಬಿಡಿಎ ಕ್ರಮಕ್ಕೆ ನಮ್ಮ ವಿರೋಧವಿದೆ ಎಂದರು.
ಸಂದ ಉಪಾಧ್ಯ ಗೋವಿಂದರಾಜ್ ಮಾತನಾಡಿ, ಕಾರಿಡಾರ್ ನಿರ್ಮಾಣಕ್ಕೆ ರೈತರಿಂದ ವಿರೋಧವಿಲ್ಲ. ಕೇಂದ್ರ ಸರ್ಕಾರದ ಹೊಸ ಭೂ ಸ್ವಾಧಿನ ಕಾಯ್ದೆ 2013 ರಂತೆ ಪರಿಹಾರ ಕಲ್ಪಿಸಬೇಕು. ಈ ಬಗ್ಗೆ ಸರ್ಕಾರ ಪಾರದರ್ಶಕವಾಗಿ ೂಷಣೆ ಮಾಡಬೇಕು ಎಂದು ಆಗ್ರಹಿಸಿದರು. 2013 ಭೂಸ್ವಾಧಿನ ಕಾಯ್ದೆಯನ್ನು ಸದರಿ ಯೋಜನೆಗೆ ಅಳವಡಿಸಿಕೊಳ್ಳುವಂತೆ ಬಿಡಿಎಗೆ ನಿರ್ದೇಶನ ನೀಡುವಂತೆ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಬೇಕು. ರಾಜ್ಯ ಸರ್ಕಾರ ಈ ಯೋಜನೆಗೆ ಭೂ ಸ್ವಾಧಿನಕ್ಕೊಳಪಡುವ ಸಂತ್ರಸ್ತರಿಗೆ ನೀಡುವ ಪರಿಹಾರ ಧನವನ್ನು ಬಹಿರಂಗವಾಗಿ ಪ್ರಕಟಿಸುವುದು ಸೇರಿ ಅನೇಕ ಸಲಹೆಗಳನ್ನು ರೈತರು ಸಭೆಯ ಮುಂದಿಟ್ಟರು.
ಉಪಾಧ್ಯರಾದ ಗೋವಿಂದರಾಜ್, ಗೌತಮ್ ಚಂದ್ ಜೈನ್, ಪ್ರಧಾನ ಕಾರ್ಯದರ್ಶಿ ರು, ಖಜಾಂಚಿ ನರಸಿಂಹ ಮೂರ್ತಿ, ರೈತ ಮುಖಂಡರಾದ ಸೂಲಿಕುಂಟೆ ಶ್ರೀಧರ್ ರೆಡ್ಡಿ, ಮುಳ್ಳೂರು ಕೃಷ್ಣ, ಗೋಪಾಲ ರೆಡ್ಡಿ, ಶಿವಪ್ರಸಾದ್ ಸೇರಿದಂತೆ ನೂರಾರು ರೈತರು, ನಿವೇಶನದಾರರು ಭಾಗವಹಿಸಿದ್ದರು.