

ಕುಣಿಗಲ್: ಎಲ್ಲ ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಜ್ಞಾನಿ ಇರುತ್ತಾನೆ. ಅವರಲ್ಲಿ ಇರುವ ವಿಜ್ಞಾನಿಗೆ ಸಮರ್ಪಕ ಪ್ರೋತ್ಸಾಹ, ಸಹಕಾರ ಸಿಕ್ಕಲ್ಲಿ ಉತ್ತಮ ವಿಜ್ಞಾನಿಯಾಗಿ ಮನುಕುಲಕ್ಕೆ ಉತ್ತಮ ಕೊಡುಗೆ ನೀಡುತ್ತಾರೆ ಎಂದು ಇಸ್ರೋ ಮಾಜಿ ಅಧ್ಯಕ್ಷ, ಪದ್ಮಶ್ರೀ ಎ.ಎಸ್.ಕಿರಣ್ ಕುಮಾರ್ ತಿಳಿಸಿದರು.
ಪಟ್ಟಣದ ಸವೋರ್ದಯ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನೋತ್ಸವ&-2024ಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿ, ತಮ್ಮ ಬಾಲ್ಯದಲ್ಲಿ ಎಲ್ಲರಂತೆ ಅಡಿಕೊಂಡು ಬೆಳೆದಿದ್ದು, ಎಲ್ಲ್ಲ ವಿಷಯಗಳ ಬಗ್ಗೆ ಆಸಕ್ತಿ ಹೊಂದಿದ್ದೆ. ಶಾಲೆ, ಕಾಲೇಜಲ್ಲಿ ಹೇಳಿಕೊಡುತ್ತಿದ್ದ ಪಾಠ& ಪ್ರವಚನಗಳ ಬಗ್ಗೆ ಪ್ರತಿಯೊಂದನ್ನು ಮನನ ಮಾಡಿಕೊಳ್ಳುತ್ತಿದ್ದೆವು. ಬಾಲ್ಯದಲ್ಲಿ ಸ್ವಾಮೀಜಿಯೊಬ್ಬರು ನೀಡಿದ ವಿಶನ್ ಮಾಸ್ಟರ್ ಮಸೂರ 3ಡಿ ಆಯಾಮದಲ್ಲಿ ಚಿತ್ರ ವೀಕ್ಷಿಸಬಹುದಾಗಿತ್ತು. ಅಂದಿನಿಂದ ವಿಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಾಗಿ ಇಸ್ರೋ ಸೇರಿದೆನು. 1975ರಲ್ಲಿ ಭಾಸ್ಕರ ಉಪಗ್ರಹಕ್ಕೆ ದೂರದರ್ಶಕ ಕ್ಯಾಮರಾ ಅಳವಡಿಸುವ ಸವಾಲಿನ ಕೆಲಸವನ್ನು ಅಹಮದಾಬಾದ್ನಲ್ಲಿನ ಸಂಶೋಧನಾ ಕೇಂದ್ರದಲ್ಲಿ ನಿರ್ವಹಿಸುವಲ್ಲಿ ಯಶಸ್ವಿಯಾದೆ ಎಂದರು.
ನಾನು ಇಸ್ರೋ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕ್ರಯೋಜನಿಕ್ ಇಂಜಿನ್ ಸುಧಾರಣೆ, ಬಾಹ್ಯಾಕಾಶ ನಕ್ಷತ್ರಗಳ ಅಧ್ಯಯನ, ಅಸ್ತ್ರೋಸ್ಯಾಟ್ ಉಪಗ್ರಹ ಉಡಾವಣೆ, ನೇವಿಗೇಶನ್ಗೆ ಅನುಕೂಲವಾಗಲು ಹಲವು ಉಪಗ್ರಹ ಉಡಾವಣೆ ಮಾಡಲಾಯಿತು. ಇದೀಗ ದೇಶದ ಮುಂದೆ 2024ಕ್ಕೆ ಮಾನವಸಹಿತ ಚಂದ್ರಯಾನ ಮಹತ್ತರ ಯೋಜನೆಯಾಗಿದ್ದು, ಈ ನಿಟ್ಟಿನಲ್ಲಿ ವಿಜ್ಞಾನಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಮಂಗಳ ಗ್ರಹದಲ್ಲಿ ಮಾನವ ವಾಸಕ್ಕೆ ಯೋಗ್ಯವಾಗುವ ವೇಗವಾಗಿ ಚಲಿಸುವ ರಾಕೆಟ್ ಸಂಶೋಧನೆಯಾಗಬೇಕು ಎಂದರು.
ಈಗಿರುವ ತಂತ್ರಜ್ಞಾನದಲ್ಲಿ ಪ್ರಯಾಣಕ್ಕೆ ತಗಲುವ ಸಮಯ ಹತ್ತು ತಿಂಗಳು. ಹೀಗಾಗಿ ಭವಿಷ್ಯದಲ್ಲಿ ಸಾಧ್ಯವಾದರೂ ಆಗಬಹುದು. ಕ್ಷೇತ್ರ ಯಾವುದೇ ಇರಲಿ, ಸತತ ಸಾಧನೆ ಮುಖ್ಯ. ಒತ್ತಡಗಳನ್ನು ಸಮರ್ಥವಾಗಿ ನಿಭಾಯಿಸಿ ಪ್ರಯತ್ನಗಳು ವಿಫಲವಾದರೂ ಕುಗ್ಗದೆ ಮರುಪ್ರಯತ್ನ ಮಾಡಿ ಯಶಸ್ಸು ಸಾಧಿಸಬೇಕು ಎಂದರು.
ಸವೋರ್ದಯ ಸಂಸ್ಥೆಯ ಅಧ್ಯಕ್ಷ ಎಚ್.ವಿ.ನಾಗರಾಜು ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ವೃದ್ಧಿಸುವ ನಿಟ್ಟಿನಲ್ಲಿ ವಿಜ್ಞಾನೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ನುರಿತ ವಿಜ್ಞಾನಿಗಳಿಂದ ಮಕ್ಕಳೊಂದಿಗೆ ಸಂವಾದ ಏರ್ಪಡಿಸಿ ವಿಜ್ಞಾನದ ಬಗ್ಗೆ ಅಭಿರುಚಿ ಹೆಚ್ಚಿಸಲಾಗುವುದು ಎಂದರು. ವಿವಿಧ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮಲ್ಲಿ ಪಾಲ್ಗೊಂಡಿದ್ದರು.
ಸಂಸ್ಥೆಯ ಉಪಾಧ್ಯ್ಷೆ ನಳಿನಾ ನಾಗರಾಜು, ಕಾರ್ಯದರ್ಶಿ ಡಾ.ನಿಖಿಲ್, ಪ್ರಾಚಾರ್ಯ ಕೃಷ್ಣಪ್ಪ ಇದ್ದರು. ವಿದ್ಯಾರ್ಥಿ ಗುರುಚರಣ್ ರಾಕೆಟ್ ಚಿತ್ರ ರಚಿಸಿ ಮೆಚ್ಚುಗೆ ಗಳಿಸಿದರು.
ಮಂಗಳಯಾನ ಸವಾಲಿನ ಕೆಲಸ:
ಮಂಗಳಯಾನ ಬಹಳ ಸವಾಲಿನ ಕೆಲಸವಾಗಿದು,್ದ ಹಗಲು& ರಾತ್ರಿ ಸಾವಿರಾರು ವಿಜ್ಞಾನಿಗಳು ಶ್ರಮಪಟ್ಟು ಮೊದಲ ಪ್ರಯತ್ನದಲ್ಲೇ ಮಂಗಳಯಾನ ಯಶಸ್ವಿಗೊಳಿಸಿದ್ದಾರೆ. ಭಾರತದ ಈ ಸಾಧನೆಗೆ ಜಗತ್ತೇ ಬೆರಗಾಗಿ ನೋಡುವಂತಾಗಿದೆ. 60 ಕೋಟಿ ಕಿ.ಮೀ ದೂರದಲ್ಲಿರುವ ಮಂಗಳನ ಕಕ್ಷೆಗೆ ಉಪಗ್ರಹ ಕಳುಹಿಸಿ ಮಂಗಳ ಗ್ರಹದ ಬಗ್ಗೆ ಅಧ್ಯಯನ ಸವಾಲಿನ ಕೆಲಸ. ಉಪಗ್ರಹ ಹಾರಿಸಿ ಸರಾಸರಿ ಹತ್ತು ತಿಂಗಳ ನಂತರ ಹಲವು ಸವಾಲುಗಳು ಎದುರಾಗುತ್ತವೆ. 60 ಕೋಟಿ ಕಿ.ಮೀ ದೂರದ ಉಪಗ್ರಹ ಸಂದೇಶ ಹೋಗಿಬರಲು 24 ನಿಮಿಷ ತೆಗೆದುಕೊಳ್ಳುತ್ತಿದ್ದು, ಇದನ್ನು ಯಶಸ್ವಿಯಾಗಿ ನಿರ್ವಹಿಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಛಾಪು ಮೂಡಿಸಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ತಿಳಿಸಿದರು.