

ಮುಧೋಳ: ನಗರದ ಮುಧೋಳ- ಲೋಕಾಪುರ ರಸ್ತೆಯಲ್ಲಿನ ಕವಿಚಕ್ರವರ್ತಿ ರನ್ನಭವನದಲ್ಲಿ, ಜ. 18 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಸರ್ಕಾರಿ, ಅರೆ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಸಮ್ಮೇಳನ ನಡೆಯಲಿದೆ ಎಂದು ವಿಶ್ರಾಂತ ಡಿಡಿಪಿಐ ಸಿದ್ದರಾಮ ಮನಹಳ್ಳಿ ಹೇಳಿದರು.
ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ನೌಕರರಿಗೆ ನಿವೃತ್ತಿ ನಂತರ ಹತಾಸೆ ಮನೋಭಾವ ಬರಬಾರದು ಎಂದು ಈ ಸಂಘ ಸ್ಥಾಪನೆಯಾಗಿದ್ದು, ಸಂಘದ ಮುಖಾಂತರ ಈಗಾಗಲೇ ತಾಲೂಕಿನಲ್ಲಿ 17 ಸಮ್ಮೇಳನಗಳು ನಡೆದಿದ್ದು, ಈಗ ಜಿಲ್ಲಾಮಟ್ಟದಲ್ಲಿ ಪ್ರಪ್ರಥಮವಾಗಿ ಸಮ್ಮೇಳನ ಆಯೋಜಿಸಲಾಗಿದೆ ಎಂದರು.
50 ವರ್ಷ ದಾಂಪತ್ಯ ಜೀವನ ಸಾಗಿಸಿರುವ ನೌಕರರಿಗೆ ಸ್ವರ್ಣ ದಾಂಪತ್ಯ ಹಾಗೂ ಎಂಬತ್ತು ವರ್ಷದ ಹಿರಿಯರಿಗೆ ಗೌರವ ಸನ್ಮಾನ ನಡೆಯಲಿದೆ. ಜಿಲ್ಲೆ 9 ತಾಲೂಕಿನ ಎಲ್ಲ ಜಿಲ್ಲಾ ಸರ್ಕಾರಿ, ಅರೆ ಸರ್ಕಾರಿ ನಿವೃತ್ತ ನೌಕರರ ಸಂಘದ ಸದಸ್ಯರು ಸ್ವ ಇಚ್ಚೆಯಿಂದ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದರು.
ಕೊಣ್ಣೂರ ಹೊರಗಿನಮಠದ ಡಾ. ವಿಶ್ವಪ್ರಭು ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದು, ಸಂಘದ ತಾಲೂಕಾಧ್ಯಕ್ಷ ಮಹಾದೇವ ದಾಸರಡ್ಡಿ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಉದ್ಘಾಟಿಸುವರು. ಸಂಘದ ರಾಜ್ಯಾಧ್ಯಕ್ಷ ಡಾ.ಎಲ್.ಭೈರಪ್ಪ ಅವರು ಡಾ. ಸಿದ್ದು ದಿವಾಣ ಅವರ ಸಂಪಾದಕತ್ವದ ‘ಅನುಭಾವ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು.
ಉಪನ್ಯಾಸಕರಾಗಿ ವಿಶ್ರಾಂತ ಡಿಡಿಪಿಐ ಸಿದ್ದರಾಮ ಮನಹಳ್ಳಿ, ಹನಗಂಡಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಶಾರದಾ ಮುಳ್ಳೂರ, ಡಾ. ಶಿವಾನಂದ ಕುಬಸದ, ಎಸ್.ಎಂ. ಆನಂದಪ್ಪ, ಎನ್. ನಂಜಪ್ಪ, ಜಿ. ಗುರುಲಿಂಗಸ್ವಾಮಿ, ಶಾರದಮ್ಮ, ಮುನಿದೇವ ಕುಮಾರ, ಪ್ರಧಾನ ಕಾರ್ಯದರ್ಶಿ ಉದಯ ವಾಳ್ವೇಕರ, ಚಂದ್ರಕಾಂತ ರಂಗಣ್ಣವರ ಆಗಮಿಸುವರು.
ಸುದ್ದಿಗೋಷ್ಟಿಯಲ್ಲಿ ಎಂ. ವಿ. ಮನಹಳ್ಳಿ, ಡಾ. ಎಸ್.ಆರ್. ದಿವಾಣ, ವಿಜಯರಾವ್ ಕುಲಕರ್ಣಿ, ವಿ.ಜಿ. ಗೋವಿಂದಪ್ಪನವರ ಇದ್ದರು.