

ವಿಜಯವಾಣಿ ಸುದ್ದಿಜಾಲ ಧಾರವಾಡ
ನಮ್ಮ ಸುತ್ತಲಿನ ಪರಿಸರ ಸ್ವಚ್ಚ ಹಾಗೂ ಸುಂದರವಾಗಿದ್ದರೆ ಸಮಾಜದ ಸ್ವಾಸ್ಥ$್ಯ ಹಾಗೂ ಬದುಕು ಸುಂದರವಾಗಿರುತ್ತದೆ. ಆಧುನಿಕತೆ ಭರಾಟೆಯಲ್ಲಿ ಪರಿಸರದ ಕಾಳಜಿ ಮರೆಯಬಾರದು ಎಂದು ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಹೇಳಿದರು.
ನಗರದ ಜೆಎಸ್ಎಸ್ನ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಮಾನವ ಹಕ್ಕುಗಳ ಸಂ ಮತ್ತು ಜೆಎಸ್ಎಸ್ನ ಎಸ್ಎಂಐ ಎನ್ಎಸ್ಎಸ್ ಟಕದ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಪರಿಸರ ದಿನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಾವು ವಾಸಿಸಲು ಕಾಂಕ್ರೀಟ್ನ ಸೂರು ಮುಖ್ಯವಲ್ಲ. ಸೇವಿಸಲು ಶುದ್ಧ ಗಾಳಿ, ನೀರು, ಬೆಳಕು ಇದ್ದರೆ ಮಾತ್ರ ಮಾನವ ಬದುಕಲು ಸಾಧ್ಯ. ಯುವ ಜನತೆ ಈ ದೇಶದ ಶಕ್ತಿ. ಆದರೆ, ಈ ಪೀಳಿಗೆ ಸಾಮಾಜಿಕ ಜಾಲತಾಣದಲ್ಲಿ ಮಗ್ನವಾಗಿದೆ. ಯುವಕರು ಮಲೀನವಾಗುತ್ತಿರುವ ಪರಸರ ರಸಬೇಕು. ಇತ್ತೀಚಿನ ದಿನಗಳಲ್ಲಿ ತಾಪಮಾನ ಹೆಚ್ಚಾಗಿ ನದಿ ಮೂಲಗಳು, ಕರೆ, ಬಾವಿ ಹಾಗೂ ಅಂತರ್ಜಲ ಮಟ್ಟ ಕುಸಿದಿದ್ದು, ಇದಕ್ಕೆ ನಾವು ನಿಮಿರ್ಸಿದ ಕಲುಷಿತ ವಾತಾವರಣವೇ ಕಾರಣ. ಮುಂದಿನ ದಿನಗಳಲ್ಲಿ ಮಾನವ ಈ ಭೂಮಿಯಲ್ಲಿ ಬದುಕಲು ಪರಿಸರದ ರಕ್ಷಣೆ ಮುಖ್ಯ ಎಂದರು.
ಅಧ್ಯತೆ ವಹಿಸಿದ್ದ ಜನತಾ ಶಿಣ ಸಮಿತಿ ಕಾರ್ಯದಶಿರ್ ಡಾ. ಅಜಿತ ಪ್ರಸಾದ ಮಾತನಾಡಿ, ನಮ್ಮ ಆಸ್ತಿಯಾದ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮರ&ಗಿಡಗಳ ಮಾರಣ ಹೋಮವಾಗುತ್ತಿದೆ. ಅಭಿವೃದ್ಧಿ ಪರಿಸರ ಪೋಷಣೆಯೊಂದಿಗೆ ಆಗಲಿ. ಮನೆ ಸುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದ ಅವರು, ವಿದ್ಯಾಥಿರ್ಗಳಿಗೆ ಪರಿಸರ ರಕ್ಷಣೆಯ ಪ್ರತಿಜ್ಞಾವಿಧಿ ಬೋಧಿಸಿದರು.
ಜೆಎಸ್ಎಸ್ ಐಟಿಐ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಶಿಕ್ಷಕರು, ವಿದ್ಯಾಥಿರ್ಗಳು, ಇತರರು ಇದ್ದರು. ರೋನಿಲ್ ಮನೋಹರ ಸ್ವಾಗತಿಸಿದರು. ಡಾ. ಆರ್.ವಿ. ಚಿಟಗುಪ್ಪಿ ನಿರೂಪಿಸಿದರು. ಸೌಮ್ಯ.ಆರ್. ವಂದಿಸಿದರು.