ನಡೆದು ಬಂದ ದಾರಿಯ ಮರೆಯದಿರಿ

10MDG2 KALIKA SAMAGRI
Published on

ಮುಂಡರಗಿ: ಉನ್ನತ ಸ್ಥಾನಕ್ಕೇರಿದ ನಂತರ ನಾವು ನಡೆದುಬಂದ ದಾರಿಯನ್ನು ಯಾವತ್ತಿಗೂ ಮರೆಯಬಾರದು ಎಂದು ಬಿಇಒ ಗಂಗಾಧರ ಅಣ್ಣಿಗೇರಿ ಹೇಳಿದರು.

ತಾಲೂಕಿನ ದಿಂಡೂರ ತಾಂಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ದಾನಿಗಳಿಂದ ಕೊಡಮಾಡಿದ ಸಮವಸ್ತ್ರ ಹಾಗೂ ಕಲಿಕಾ ಪರಿಕರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಖ್ಯಶಿಕ್ಷಕ ವಿನಾಯಕ ಹೊಸಮನಿ ಮಾತನಾಡಿದರು.

ಶಾಲೆಯ ವಿದ್ಯಾರ್ಥಿಗಳಿಗೆ ನಿವೃತ್ತ ಮುಖ್ಯಶಿಕ್ಷಕ ಆರ್.ಬಿ. ಹೊಸಕೇರಿ ಅವರು 30ಸಾವಿರ ರೂ. ಮೌಲ್ಯದ ಟಿ ಶರ್ಟ್, ಪ್ಯಾಂಟ್ ವಿತರಿಸಿದರು. ಮಗ್ಗಿ ಸುಗ್ಗಿಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ 5ಸಾವಿರ ರೂ. ಮೌಲ್ಯದ ಶಾಲಾ ಪರಿಕರಗಳನ್ನು ಬ್ಯಾಂಕ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಎಚ್ಚರಸ್ವಾಮಿ ನಾಯಕ ವಿತರಿಸಿದರು. ಗದಗ ವ್ಯಾಪಾರಸ್ಥ ಸುರೇಶ ಹಾವನೂರ 25 ಊಟದ ತಟ್ಟೆ ಮತ್ತು ಶಿರಹಟ್ಟಿಯ ಸಿಆರ್‌ಪಿ ಎನ್.ಎನ್. ಸಾವಿರಕುರಿ ಅವರು ಟೈ ಮತ್ತು ಬೆಲ್ಟ್ ವಿತರಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಹನಮಂತಪ್ಪ ಲಮಾಣಿ, ಉಪಾಧ್ಯಕ್ಷೆ ಸಕ್ಕುಬಾಯಿ ಲಮಾಣಿ, ಕುಬೇರ ನಾಯಕ, ಅನ್ನಕ್ಕ ಲಮಾಣಿ, ವಿನಾಯಕ ಹೊಸಮನಿ, ಮಂಜುನಾಥ ಭತ್ತಿಕೊಪ್ಪದ, ಬಿ.ಆರ್. ಗೌಡರ, ಶಿವಣ್ಣ ನಾಯಕ, ಚೇತನ ನಾಗನಗೌಡರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net