ದೇಶದ ಸಂಸ್ಕೃತಿ ಮರೆಯಬೇಡಿ

Don't forget the culture of the country.
ಬಿಎಲ್‌ಡಿಇ ಸಂಸ್ಥೆಯ ತೇರದಾಳದ ಪ್ರಭುಲಿಂಗ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪ್ರಸಕ್ತ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೀರಭೀಕ್ಷಾವರ್ತಿ ಮಠದ ಜಗದ್ಗುರು ಶಿವಶಂಕರ ಶಿವಾಚಾರ್ಯರು ಚಾಲನೆ ನೀಡಿದರು. ಡಿಡಿಪಿಐ ಪುಂಡಲಿಕ ಕಾಂಬಳೆ, ಪ್ರಾಚಾರ್ಯ ವಿ.ಎಲ್. ನಾರಾಯಣಕರ ಇದ್ದರು.
Published on

ತೇರದಾಳ: ಬದುಕಿನಲ್ಲಿ ನೀವು ಎಷ್ಟೇ ಎತ್ತರಕ್ಕೆ ಬೆಳೆದರೂ ದೇಶದ ಸಂಸ್ಕೃತಿ ಅಭಿಮಾನ ಮರೆಯಬೇಡಿ ಎಂದು ಹುಬ್ಬಳ್ಳಿ ವೀರಭಿಕ್ಷಾವರ್ತಿ ನೀಲಕಂಠಮಠದ ಜಗದ್ಗುರು ಶಿವಶಂಕರ ಶಿವಾಚಾರ್ಯರು ಸಲಹೆ ನೀಡಿದರು.

ಬಿಎಲ್‌ಡಿಇ ಸಂಸ್ಥೆಯ ಸ್ಥಳೀಯ ಪ್ರಭುಲಿಂಗ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪ್ರಸಕ್ತ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಚಾಲನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಸಾಧಿಸುವ ಛಲ ಇಟ್ಟುಕೊಂಡು ಹೆಜ್ಜೆ ಹಾಕಿ. ಸಮಸ್ಯೆಗಳನ್ನು ಸವಾಲುಗಳನ್ನಾಗಿ ಸ್ವೀಕರಿಸಿ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಕಾಂಬಳೆ ಮಾತನಾಡಿ, ಜನ್ಮ ನೀಡಿದ ತಂದೆ-ತಾಯಿಯ ಋಣ ತೀರಿಸಲು ಸಾಧ್ಯ ಇಲ್ಲ. ಮೊದಲು ಅವರನ್ನು ಗೌರವದಿಂದ ಕಾಣಿರಿ. ಸಾಧಕರ ಪಟ್ಟಿಯಲ್ಲಿ ನೀವು ಸೇರುವ ದೃಢ ಸಂಕಲ್ಪದೊಂದಿಗೆ ಪಯಣ ನಡೆಸಿ ಎಂದು ಹೇಳಿದರು.

ಪ್ರಾಚಾರ್ಯ ವಿ.ಎಲ್. ನಾರಾಯಣಕರ ಅಧ್ಯಕ್ಷತೆ ವಹಿಸಿದ್ದರು. ಡಾ. ಪಿ.ಎಸ್. ಬಟವಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎನ್. ಹತ್ತಿ, ರೇವನೇಶ ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net