

ಅಥಣಿ: ದೇಶದ ಸಂಸ್ಕೃತಿ ಆಚಾರ-ವಿಚಾರಗಳನ್ನು ಯುವಕರು ಮರೆಯಬಾರದು ಎಂದು ಜಗದೀಶ ಹವಾಲ್ದಾರ ಹೇಳಿದರು.
ತಾಲೂಕಿನ ಕೆಎಲ್‌ಇ ಸಂಸ್ಥೆಯ ಶ್ರೀಮತಿ ಸಿ.ಬಿ.ರಣಮೋಡೆ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾತ-ಪಿತ ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಮಕ್ಕಳನ್ನು ಬೆಳೆಸುವಲ್ಲಿ ತಂದೆ ತಾಯಿಗಳ ಪಾತ್ರ ಎಷ್ಟು ಮುಖ್ಯ ಎಂಬುದನ್ನು ತಿಳಿಸಿದರು.
ನೂರಕ್ಕೂ ಹೆಚ್ಚು ಪಾಲಕರು ಪಾಲ್ಗೊಂಡು ಹರ್ಷ ವ್ಯಕ್ತಪಡಿಸಿದರು. ಇಂತಹ ಸಂಸ್ಕಾರ, ಸಂಸ್ಕೃತಿ ಇಂದಿನ ಪೀಳಿಗೆಗೆ ತಿಳಿಸುವುದು ಅವಶ್ಯಕವಾಗಿ ಬೇಕಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕರಾದ ಅಮೀತ್ ಹಿರೇಮಠ, ಶಂಕರ ಗೌರಗೌಡರ ಇತರರಿದ್ದರು. ಶಿಕ್ಷಕರಾದ ಮಲ್ಲಿಕಾರ್ಜುನ ಕೋರಿ ನಿರೂಪಿಸಿದರು. ಕೆ.ಆರ್.ಬಿ ಪಾಟೀಲ ಸ್ವಾಗತಿಸಿದರು. ದೀಪಕ ಕಾಂಬಳೆ ವಂದಿಸಿದರು.