ಕರ್ತವ್ಯ ನಿರ್ವಹಣೆ ಮರೆಯದಿರಿ

KDR demo
ಕಡೂರಿನ ಅಂಬೇಡ್ಕರ್ ವೃತ್ತದಲ್ಲಿ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಸಂವಿಧಾನ ಪ್ರತಿಜ್ಞಾವಿಧಿ ಬೋಧಿಸಿದರು. ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಪ್ರವೀಣ್, ಮಂಜುಳಾ, ನಟರಾಜ್, ಮನು, ಈರಳ್ಳಿ ರಮೇಶ್ ಇತರರಿದ್ದರು.
Published on

ಡೂರು: ಸಮಾನತೆಗಾಗಿ ರೂಪಿಸಿರುವ ಸಂವಿಧಾನವನ್ನು ಗೌರವಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಗೌರವ ಸಲ್ಲಿಸಿ ಮತನಾಡಿ, ಸಂವಿಧಾನ ರಾಷ್ಟ್ರದ ಕಾನೂನಿಗೆ ಅಡಿಪಾಯವಾಗಿದ್ದು, ಸೌಹಾರ್ದ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ಮಾನವ ಸರಪಳಿಯೊಂದಿಗೆ ವಿನೂತನ ಕಾರ್ಯಕ್ರಮದ ಮೂಲಕ ಒಗ್ಗಟ್ಟಿನ ಸಂದೇಶ ಸಾರಲು, ಸಂವಿಧಾನಕ್ಕೆ ಗೌರವ ಸಲ್ಲಿಸಲು ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಹಕ್ಕುಗಳನ್ನು ಪಡೆಯಲು ತೋರುವಷ್ಟೇ ಆಸಕ್ತಿ ಕರ್ತವ್ಯ ನಿರ್ವಹಣೆಯಲ್ಲೂ ತೋರಿಸಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕು ಎಂದರು.
ತಾಲೂಕಿನಾದ್ಯಂತ ಏಕಕಾಲದಲ್ಲಿ ಪ್ರಜಾಪ್ರಭುತ್ವ ದಿನ ಆಚರಿಸಲಾಯಿತು. ಮಾನವ ಸರಪಳಿ ರಚಿಸಲಾಯಿತು. ಸಂಘ ಸಂಸ್ಥೆಗಳು ಸಾಥ್ ನೀಡಿದವು. ಪಟ್ಟಣದ ಬಿ.ಎಚ್.ರಸ್ತೆ, ಯು.ಬಿ.ರಸ್ತೆ ಹಾಗೂ ಕನಕ ವೃತ್ತಗಳ ಭಾಗದಲ್ಲಿ ಶಾಲಾ ಮಕ್ಕಳು ಮಾನವ ಸರಪಳಿ ರಚಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಸಂವಿಧಾನ ಪ್ರತಿಜ್ಞಾವಿಧಿ ಬೋಧಿಸಿದರು. ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಪಂ ಇಒ ಸಿ.ಆರ್.ಪ್ರವೀಣ್, ಸಮಾಜಕಲ್ಯಾಣಾಧಿಕಾರಿ ನಟರಾಜ್, ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ಈರಳ್ಳಿ ರಮೇಶ್, ಮರುಗುದ್ದಿಮನು, ಸೈಯಾದ್ ಯಾಸೀನ್, ಇಕ್ಬಾಲ್, ಲತಾರಾಜು, ಹಾಲಮ್ಮ ಸಿದ್ರಾಮಪ್ಪ, ಸುಧಾ ಉಮೇಶ್, ಜ್ಯೋತಿ ಆನಂದ್, ಡಿಎಸ್‌ಎಸ್ ಮುಖಂಡರಾದ ಕೃಷ್ಣಪ್ಪ, ಶೂದ್ರ ಶ್ರೀನಿವಾಸ್, ಟಿ.ಮಂಜಪ್ಪ, ಲಕ್ಷ್ಮಣ್, ಶ್ರೀಕಾಂತ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ್, ಆಸಂದಿ ಕಲ್ಲೇಶ್, ಚಂದ್ರಪ್ಪ, ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net