ದೇಶ, ಭಾಷೆ, ಅಸ್ಮಿತೆ ಮರೆಯದಿರಿ

Students felicitation
Published on

ಭಟ್ಕಳ: ಸ್ವದೇಶ, ಸ್ವಭಾಷ, ಸ್ವಭೂಷ, ನಮ್ಮ ತಾಯ್ನಾಡು, ನಮ್ಮ ಮಾತೃಭಾಷೆ ಹಾಗೂ ನಮ್ಮ ಅಸ್ಮಿತೆಯನ್ನು ನಾವು ಮರೆಯದೇ ಅದನ್ನು ಉಳಿಸಿ ಪೋಷಿಸಬೇಕೆಂದು ಮುಕ್ಕಾದ ಶ್ರೀನಿವಾಸ ಯುನಿವರ್ಸಿಟಿಯ ಪ್ರಾಧ್ಯಾಪಕ ಶ್ರೀನಾಥ ರಾವ್ ಹೇಳಿದರು.

ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ ಪಿ.ಯು ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕ ಸ್ನೇಹಸಮ್ಮೇಳನ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಮ್ಯಾನೇಜರ ರಾಜೇಶ ನಾಯಕ ಮಾತನಾಡಿದರು. ಟ್ರಸ್ಟಿನ ಅಧ್ಯಕ್ಷ ಡಾ. ಸುರೇಶ ನಾಯಕ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿ ಸುಮಿತ್ರಾ ಕೌಶಿಕ ಮತ್ತು ರಮೇಶ ಖಾರ್ವಿ ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿದ 34 ವಿದ್ಯಾರ್ಥಿಗಳಿಗೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಮೂವರು ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ಪಾ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ವಿಭಾಗವಾರು ಅತ್ಯುತ್ತಮ ವಿದ್ಯಾರ್ಧಿಗಳಾಗಿ ಕಲಾ ವಿಭಾಗದಲ್ಲಿ ತೇಜಸ್ ಗೊಂಡ, ವಾಣಿಜ್ಯದ ಗಣಕ ಶಾಸ್ತ್ರ ವಿಭಾಗದಲ್ಲಿ ದೀಪಾ ಈಶ್ವರ ನಾಯ್ಕ, ವಾಣಿಜ್ಯದ ಸಂಖ್ಯಾ ಶಾಸ್ತ್ರ ವಿಭಾಗದಲ್ಲಿ ಪವಿತ್ರಾ ರಘುರಾಮ ಮಡಿವಾಳ, ವಿಜ್ಞಾನ ವಿಭಾಗದಲ್ಲಿ ಮತ್ತು ಮಹಾವಿದ್ಯಾಲಯದ ಅತ್ಯುತ್ತಮ ವಿದ್ಯಾರ್ಥಿಯಾಗಿ ತಿಲಕ ಹೆಬ್ಬಾರ ಆಯ್ಕೆಯಾದರು.

ಪ್ರಾಂಶುಪಾಲ ಡಾ. ವೀರೇಂದ್ರ ವಿ. ಶ್ಯಾನಭಾಗ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಲಾವಣ್ಯಾ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಅನೂಷಾ ನಾಯ್ಕ ಸ್ವಾಗತಿಸಿದರು, ಪರಮೇಶ್ವರ ಮತ್ತು ಅನನ್ಯಾ ನಾಯ್ಕ ನಿರೂಪಿಸಿದರು. ಮಂಜೂಷಾ ಕೇಶಕಾಮತ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net