ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗದಿರಿ

1001706981
ಹೊಳೆನರಸೀಪುರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಮಾದಕ ದ್ರವ್ಯ ಸೇವನೆ ಮತ್ತು ದುಷ್ಪರಿಣಾಮಗಳ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಅಪರ ಸಿವಿಲ್ ನ್ಯಾಯಾಧೀಶೆ ಐಶ್ವರ್ಯಾ ಎಸ್.ಗುಡದಿನ್ನಿ ಉದ್ಘಾಟಿಸಿ ಮಾತನಾಡಿದರು. ಸೋಮಲಿಂಗೇಗೌಡ, ಶಿವಕುಮಾರ್, ಪ್ರಾಣೇಶ್ ರಾವ್ ಇದ್ದರು.
Published on

ಹೊಳೆನರಸೀಪುರ: ಯುವ ಜನತೆ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಬಾರದು ಎಂದು ಅಪರ ಸಿವಿಲ್ ನ್ಯಾಯಾಧೀಶೆ ಐಶ್ವರ್ಯಾ ಎಸ್.ಗುಡದಿನ್ನಿ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಾದಕ ದ್ರವ್ಯ ಸೇವನೆ ಮತ್ತು ದುಷ್ಪರಿಣಾಮಗಳ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದರು.

ಯುವ ಜನತೆ ಕುತೂಹಲ ಅಥವಾ ಆಕರ್ಷಣೆಗೆ ಒಳಗಾಗಿ ಮಾದಕ ದ್ರವ್ಯ ಸೇವನೆ ಮಾಡಿದ್ದರೂ ಸಹ ನಂತರದಲ್ಲಿ ಮಾದಕ ವಸ್ತುಗಳು ಅರಿವಿಗೆ ಬಾರದಂತೆ ತನ್ನತ್ತ ಸೆಳೆದು ದಾಸರನ್ನಾಗಿ ಮಾಡುತ್ತದೆ. ಆದ್ದರಿಂದ ಮಾದಕ ದ್ರವ್ಯ ಸೇವಿಸಿ ಕ್ಷಣಿಕ ಸಂತೋಷ ಪಡೆದು, ಜೀವನ ನಾಶ ಮಾಡಿಕೊಳ್ಳದೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ, ಗುರಿ ತಲಪುವ ಮೂಲಕ ಜೀವನ ಪರ್ಯಂತ ಸಂತೋಷದ ಬದುಕು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಬಿಇಒ ಸೋಮಲಿಂಗೇಗೌಡ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್ ಮಾತನಾಡಿದರು. ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಾಣೇಶ್ ರಾವ್, ಉಪಪ್ರಾಂಶುಪಾಲ ಎಸ್.ಸಿ.ಪುರುಷೋತಮ್, ಶಿಕ್ಷಕರಾದ ಸುಮಾ, ಬಿ.ಎಸ್.ಕಾಂತರಾಜು, ತಹಸೀನ್ ಇರ್ಫಾನ್, ಫ್ರಾನ್ಸಿಸ್ ರೋಶನ್, ನಾಗವೇಣಿ, ದಿವಾಕರ್, ಎಚ್.ಆರ್.ತೀರ್ಥಪ್ಪ, ಸುಮಾರಾಣಿ, ಅಂಬುಜಾಕ್ಷಿ, ಗೌರಮ್ಮ, ವೀಣಮ್ಮ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net