

ಬೆಳಗಾವಿ: ರೋಗಪತ್ತೆ ವಿಧಾನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಚಿಕಿತ್ಸೆ ನೀಡುವಲ್ಲಿ ವಿಳಂಬವಾಗದಂತೆ ರೋಗಪತ್ತೆ ಮಾಡಬೇಕು ಎಂದು ಜೆ.ಎನ್.ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಎನ್.ಎಸ್. ಮಹಾಂತಶೆಟ್ಟಿ ಸಲಹೆ ನೀಡಿದರು.
ಕಾಹೆರ್‌ನ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ರೋಗಶಾಸ್ತ್ರ ವಿಭಾಗ ಈಚೆಗೆ ಆಯೋಜಿಸಿದ್ದ ‘ರೋಗಶಾಸ್ತ್ರದ 42ನೇ ವಾರ್ಷಿಕ ರಾಷ್ಟ್ರೀಯ ಸಮಾವೇಶ’ದಲ್ಲಿ ಅವರು ಮಾತನಾಡಿದರು.
ಕಾಹೆರ್‌ನ ಕುಲಸಚಿವ ಡಾ. ಎಂ.ಎಸ್. ಗಣಾಚಾರಿ, ಡಾ.ವಿ.ಡಿ. ಪಾಟೀಲ, ಡಾ.ಎಂ. ದಯಾನಂದ, ಡಾ. ರಾಜೇಶ್ ಪವಾರ, ಡಾ.ವಿ.ಎಂ. ಪಟ್ಟಣಶೆಟ್ಟಿ ಅವರು ಉಪಸ್ಥಿತರಿದ್ದರು. ಕರ್ನಾಟಕ ವೈದ್ಯಕೀಯ ಪರಿಷತ್ತಿನ ಪರವಾಗಿ ಡಾ.ಆನಂದ ಅಮ್ಮಣಗಿ ವೀಕ್ಷಕರಾಗಿ ಆಗಮಿಸಿದ್ದರು. ಡಾ. ಸ್ವರ್ಣಲತಾ ಗೌರಿಶಂಕರ, ಡಾ ಎಂ.ಆರ್. ಪಾರ್ಥಸಾರಥಿ ಮತ್ತು ಡಾ ಎ.ವಿ.ರಾಮಪ್ರಸಾದ ಅವರು ದತ್ತಿ ಉಪನ್ಯಾಸ ನೀಡಿದರು. ಇದೇ ವೇಳೆ ಡಾ.ಮೇಘಾ ಉಪ್ಪಿನ ಅವರಿಗೆ ಡಾ. ಎಸ್.ಜೆ. ನಾಗಲೋಟಿಮಠ ಮೆಮೋರಿಯಲ್ ಎಕ್ಸಲೆನ್ಸ್ ಇನ್ ಟೀಚಿಂಗ್ ಅವಾರ್ಡ್ ನೀಡಲಾಯಿತು. ಡಾ. ಅನಿತಾ ಬೋರ್ಗಿಸ್, ಡಾ.ಮೀನಲ್ ಹಸ್ತಕ, ಡಾ. ನಂದಿನಿ ಮತ್ತು ಡಾ. ತುಳಸಿ ರಾಮನ್ ಉಪನ್ಯಾಸ ನೀಡಿದರು.
ಸಂಘಟನಾ ಅಧ್ಯಕ್ಷೆ, ಪೆಥಾಲಜಿ ವಿಭಾಗದ ಮುಖ್ಯಸ್ಥೆ ಡಾ.ವಿಜಯಲಕ್ಷ್ಮೀ ಧೋರೆಗೋಳ ಸ್ವಾಗತಿಸಿದರು. ಸಹ ಕಾರ್ಯಾಧ್ಯಕ್ಷ ಡಾ.ರಂಜಿತ್ ಕಾಂಗಲೆ, ಸಂಘಟನಾ ಕಾರ್ಯದರ್ಶಿ ಡಾ.ಭಾಗ್ಯಶ್ರೀ ಹುನಗುಂದ ವಂದಿಸಿದರು.