ಉದಯರವಿ ಹೆಸರು ಬದಲಿಸುವುದು ಬೇಡ: ಪ್ರೊ.ಸಿ.ಪಿ.ಕೃಷ್ಣಕುಮಾರ್

Kuvempu
Published on

ಕುವೆಂಪುನಗರದ ಉದಯರವಿ ಹೆಸರಿನ ರಸ್ತೆಯ ಮಹತ್ವ ಪಾಲಿಕೆ ಸದಸ್ಯೆ ಪಲ್ಲವಿ ಬೇಗಂ ಅವರಿಗೆ ತಿಳಿದಿಲ್ಲ. ಹಾಗಾಗಿ ಅವರು ಆ ರಸ್ತೆಯ ಹೆಸರನ್ನು ಬದಲಿಸಬೇಕೆಂದು ಪಾಲಿಕೆ ಸಭೆಯಲ್ಲಿ ಸಲಹೆ ನೀಡಿದ್ದಾರೆ. ಅದು ರಾಷ್ಟ್ರಕವಿ ಕುವೆಂಪು ಅವರ ನಿವಾಸದ ಹೆಸರಿನ ರಸ್ತೆಯಾಗಿದೆ. ಹೀಗಾಗಿ ಅದರ ಮಹತ್ವವನ್ನು ಅವರಿಗೆ ಅರಿವು ಮಾಡಿಕೊಡುವ ಕೆಲಸ ಮಾಡಲಾಗುವುದು ಎಂದು ಹಿರಿಯ ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್ ಹೇಳಿದರು.


ಕುವೆಂಪು ಅವರ ಕರ್ಮಭೂಮಿ ಮೈಸೂರು. ಅವರ ಹೆಸರನ್ನೇ ಬಡಾವಣೆಗೆ ಕುವೆಂಪುನಗರ ಎಂದು ನಾಮಕರಣ ಮಾಡಲಾಗಿದೆ. ಅಲ್ಲಿನ ರಸ್ತೆಗಳು ಸಹ ಅವರ ಕೃತಿಗಳಲ್ಲಿ ಬರುವಂತಹದ್ದೇ ಆಗಿವೆ. ಕಂದಾಯ ಇಲಾಖೆ ದಾಖಲೆಗಳಲ್ಲಿಯೂ ಇದು ಇದೆ. ಇದರ ಮಾಹಿತಿ ಪಲ್ಲವಿ ಬೇಗಂ ಅವರಿಗಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಸಮಸ್ಯೆ ಇಲ್ಲದ ಕಡೆ ಸಮಸ್ಯೆ ಸೃಷ್ಟಿಸುವುದು ಕೆಲವರ ಅಭ್ಯಾಸವಾಗಿದೆ. ಅಂಬೇಡ್ಕರ್ ಅವರ ಬಗ್ಗೆ ತಮಗೆ ಗೌರವವಿದೆ. ಅಂಬೇಡ್ಕರ್ ಅವರ ಸಮ ಸಮಾಜದ ಸಂದೇಶವನ್ನು ಕುವೆಂಪು ತಮ್ಮ ಕೃತಿಗಳಲ್ಲಿ ಸಾರಿದ್ದಾರೆ. ಹಾಗಾಗಿ ಹೆಸರು ಬದಲಿಸುವುದು ಬೇಡ. ಈ ಕುರಿತಂತೆ ಪಾಲಿಕೆಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಅಧ್ಯಕ್ಷ ನೀ.ಗಿರೀಗೌಡ, ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಡಾ.ಲೀಲಾ ಪ್ರಕಾಶ್, ಕೆ.ಎಸ್.ನಾಗರಾಜು, ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net