ಕಾಮಗಾರಿ ನೆಪದಲ್ಲಿ ತೊಂದರೆ ನೀಡದಿರಿ

Mdl Mal
ನಾಗರಹಾಳ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಮಾನಪ್ಪ ವಜ್ಜಲ್ ಗುರುವಾರ ಭೂಮಿ ಪೂಜೆ ನೆರವೇರಿಸಿದರು. ಮುದಗಲ್ ಬಿಜೆಪಿ ಮಂಡಲ ಅಧ್ಯಕ್ಷ ಹುಲ್ಲೇಶ ಸಾಹುಕಾರ, ಕೆ.ನಾಗಭೂಷಣ, ಶಿವನಗೌಡ ಪಾಟೀಲ ನಾಗರಾಳ ಇತರರಿದ್ದರು.
Published on

ಮುದಗಲ್: ಕೆಕೆಆರ್‌ಡಿಬಿ ಅನುದಾನದಡಿ ಕ್ಷೇತ್ರದ 120 ಗ್ರಾಮಗಳಲ್ಲಿಗೆ ತಲಾ 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಅಕ್ಷರ ಆವಿಷ್ಕಾರ ಯೋಜನೆಯಡಿ 5.17 ಕೋಟಿ ರೂ. ವೆಚ್ಚದಲ್ಲಿ ಪೀಠೋಪಕರಣ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.

ನಾಗರಹಾಳ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಗುರುವಾರ ಮಾತನಾಡಿದರು.

ಲಿಂಗಸುಗೂರು ಸರ್ಕಾರಿ ಪಪೂ ಕಾಲೇಜಿಗೆ 45 ಲಕ್ಷ ರೂ. ಮತ್ತು ಕ್ಷೇತ್ರದ 8 ಪ್ರಥಮ ದರ್ಜೆ ಕಾಲೇಜಿಗೆ ತಲಾ 20 ಲಕ್ಷ ರೂ.ವೆಚ್ಚದಲ್ಲಿ ಪೀಠೋಪಕರಣ ಖರೀದಿಸಲಾಗುವುದು. ಜೆಜೆಎಂ ಕಾಮಗಾರಿ ಕುರಿತು ಹಲವು ದೂರುಗಳು ಬಂದಿದ್ದು, ಕಾಮಗಾರಿ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಬಳಿಕ ಖೈರವಾಡಗಿ, ಮಾವಿನಬಾವಿ, ಗುಂಡಸಾಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಖೈರವಾಡಗಿ ಗ್ರಾಪಂ ಅಧ್ಯಕ್ಷ ಮಂಜುಳಾ, ಪ್ರಮುಖರಾದ ವೆಂಕೋಬ ನಾಯಕ, ಶರಣಬಸವ ಮುರಾಳ, ದೇವಪ್ಪ, ಮಹಾಂತಗೌಡ ಬಯ್ಯಪುರ, ಮಲ್ಲನಗೌಡ ಬೊಮ್ಮನಾಳ, ಖೈರವಾಡಗಿ ಪಿಡಿಒ ರಾಮಪ್ಪ, ನಾಗರಾಳ ಪಿಡಿಒ ಪ್ರವೀಣ ಪಾಟೀಲ, ಖಾಜಾಸಾಬ್, ಮುತ್ತಣ್ಣ, ಹನುಮಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net