ಸರ್ಕಾರಿ ಶಾಲೆಗಳೆಂದರೆ ಅಸಡ್ಡೆ ಬೇಡ

19blrp3
Published on


ಬೇಲೂರು : ಸರ್ಕಾರಿ ಶಾಲೆಗಳೆಂದರೆ ಅಸಡ್ಡೆ ಬೇಡ, ಅಲ್ಲಿ ಓದಿದಂತ ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಗಳಾಗಿರುವ ನಿದರ್ಶನವಿದ್ದು, ಈಗಿನ ಮಕ್ಕಳು ಉತ್ತಮವಾಗಿ ಓದಿ ಏನನ್ನಾದರೂ ಸಾಧಿಸಲು ಮುಂದಾಗಬೇಕು ಎಂದು ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಬಿ.ಎಂ.ಸಂತೋಷ್ ಹೇಳಿದರು.
ತಮ್ಮ ಹುಟ್ಟು ಹಬ್ಬದ ಅಂಗವಾಗಿ ಬಿ.ಎಂ.ಸಂತೋಷ್ ಗೆಳೆಯರ ಬಳಗದಿಂದ ತಾಲೂಕಿನ ಗೆಂಡೇಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಸೋಮವಾರ ಕ್ರೀಡಾ ಸಮವಸ್ತ್ರ ವಿತರಿಸಿ ಮಾತನಾಡಿದರು.


ಸರ್ಕಾರಿ ಶಾಲೆಗಳೆಂದರೆ ಅಸಡ್ಡೆ ತೋರುವ ಈ ದಿನಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ ಅಂದಿನ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಆದ್ದರಿಂದ ಯಾರೂ ಸಹ ಸರ್ಕಾರಿ ಶಾಲೆಗಳನ್ನು ಕೀಳಾಗಿ ಕಾಣಬಾರದು. ಗ್ರಾಮೀಣ ಭಾಗದಲ್ಲಿ ಎಷ್ಟೋ ವಿದ್ಯಾರ್ಥಿಗಳಿಗೆ ಸರಿಯಾದ ಅನುಕೂಲಗಳಿಲ್ಲದೆ ವಿದ್ಯಾಭ್ಯಾಸ ನಿಲ್ಲಿಸಿದ್ದಾರೆ. ಕ್ರೀಡಾ ಪ್ರತಿಭೆ ಇದ್ದರೂ ಭಾಗವಹಿಸಲು ಸಾಧ್ಯವಾಗಿಲ್ಲ. ಆದರೆ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಓದನ್ನು ಅರ್ಧಕ್ಕೆ ನಿಲ್ಲಿಸದೆ ವಿದ್ಯಾಭ್ಯಾಸ ಮಾಡುವುದಾದರೆ ನಮ್ಮ ಕುಟುಂಬದಿಂದ ಸಹಾಕಾರ ನೀಡಲಿದ್ದೇವೆ ಎಂದರು.


ಗೆಂಡೇಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಗಣೇಶ್ ಮಾತನಾಡಿದರು. ಮುಖ್ಯ ಶಿಕ್ಷಕ ಕೆಂಚೇಗೌಡ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಆನಂದ್, ಕಾವ್ಯಾ ಸಂತೋಷ್, ಶಿಕ್ಷಕರಾದ ಸರೋಜಾ, ಸುಷ್ಮಾ, ಅನಿಕಾ, ಸುಧಾ, ರವಿಂದ್ರ, ಉಪನ್ಯಾಸಕರಾದ ಪೂರ್ಣೇಶ್, ಪ್ರದೀಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net