

ತೇರದಾಳ: ರೈತರು ಅಗತ್ಯ ಇದ್ದಷ್ಟು ಮಾತ್ರ ಬೀಜಗಳನ್ನು ಖರೀದಿಸುವ ಮೂಲಕ ಇತರರಿಗೂ ಬೀಜಗಳು ದೊರಕುವಂತೆ ಮಾಡಬೇಕು. ಹೆಚ್ಚಿಗೆ ಖರೀದಿಸಿ ಮನೆಯಲ್ಲಿ ಇಟ್ಟುಕೊಳ್ಳುವ ಪ್ರವೃತ್ತಿ ಬೇಡ ಎಂದು ಶಾಸಕ ಸಿದ್ದು ಸವದಿ ರೈತರಿಗೆ ಸಲಹೆ ನೀಡಿದರು.
ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಬಿತ್ತನೆಗೆ ಸೋಯಾಬಿನ್, ಉದ್ದು, ತೊಗರಿ ಹಾಗೂ ಹೆಸರು ಬೀಜಗಳನ್ನು ಸೋಮವಾರ ವಿತರಣೆ ಮಾಡಿ ಮಾತನಾಡಿದರು.
ಪ್ರಸಕ್ತ ವರ್ಷ ಮುಂಗಾರು ಹತ್ತು ದಿನ ಮೊದಲೇ ಪ್ರಾರಂಭಗೊಂಡಿದ್ದರಿಂದ ರೈತರಿಗೆ ಸಾಕಷ್ಟು ಸಂತಸವನ್ನುಂಟು ಮಾಡಿದೆ. ರೈತರಿಗೆ ಬೇಡಿಕೆಯಷ್ಟು ಬೀಜಗಳು ಪೂರೈಕೆ ಆಗಿವೆ. ಮುಂಗಾರು ಬಿತ್ತನೆಗೆ ತಯಾರಿ ಮಾಡಿಕೊಂಡು ಬೀಜಗಳನ್ನು ಖರೀದಿಸಿ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಇಒ ಸಿದ್ದಪ್ಪ ಪಟ್ಟಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಕೈಮಗ್ಗ ಅಭಿವದ್ಧಿ ನಿಗಮದ ಮಾಜಿ ನಿರ್ದೇಶಕ ಪ್ರವೀಣ ನಾಡಗೌಡ, ಪುರಸಭೆ ಸದಸ್ಯರಾದ ಸುರೇಶ ಕಬಾಡಗಿ, ಸಚಿನ ಕೊಡತೆ, ರೈತ ಸಂಪರ್ಕ ಕೇಂದ್ರ ಅಧಿಕಾರಿ ಎಸ್.ಎಂ. ಬಿರಾದಾರ, ಮುಖಂಡರಾದ ಮಹಾವೀರ ಕೊಕಟನೂರ, ಅಲ್ಲಪ್ಪ ಬಾಬಗೊಂಡ, ಪ್ರಭಾಕರ ಬಾಗಿ, ಮುತ್ತಪ್ಪ ಮುಳ್ಳಟ್ಟಿ, ಶಂಕರ ಕುಂಬಾರ, ಭುಜಬಲಿ ಕೆಂಗಾಲಿ, ಸದಾಶಿವ ಹೊಸಮನಿ, ಪ್ರಕಾಶ ಶೇಡಬಾಳ, ವರ್ಧಮಾನ ಕಡಹಟ್ಟಿ, ವಿಠ್ಠಲ ತಟ್ರಿ, ಮುತ್ತು ಭದ್ರಶೆಟ್ಟಿ, ಪ್ರಮೋದ ಕೋರಿಗೇರಿ ಇದ್ದರು.