ನಮ್ಮ ಕಷ್ಟಗಳಿಗೆ ದೇವರ ಹೊಣೆ ಮಾಡದಿರಿ

13ARATAL1.jpg
Published on

ಅರಟಾಳ: ನಾವು ಅನುಭವಿಸುತ್ತಿರುವ ಕಷ್ಟಗಳು ಕರ್ಮದ ಫಲವಾಗಿಯೇ ಬಂದಿರುತ್ತವೆ. ಅದಕ್ಕೆ ದೇವರನ್ನು ಹೊಣೆ ಮಾಡಲಾಗದು ಎಂದು ಇಂಚಗೇರಿ ಮಠದ ಸದ್ಗುರು ರೇವಣಸಿದ್ಧೇಶ್ವರ ಮಹಾರಾಜರು ಹೇಳಿದರು.

ಅರಟಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಇಂಚಗೇರಿ ಸದ್ಗುರು ರೇವಣಸಿದ್ಧೇಶ್ವರ ಮಹಾರಾಜರು ಮಾತನಾಡಿದರು. ಶಂಕರೆಪ್ಪ ಮಹಾರಾಜರು, ಭೀಮಣ್ಣ ಮಹಾರಾಜರು, ವಿವೇಕಾನಂದ ಮಹಾರಾಜರು, ಸದಾಶಿವ ಮಹಾರಾಜರು, ದಿವಾನಮಳ ಮಹಾರಾಜರು ಇತರರಿದ್ದರು.  

ಗ್ರಾಮದ ಭಾವುಸಾಹೇಬ ಮಹಾರಾಜರ ಆಧ್ಯಾತ್ಮ ಆಶ್ರಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರಾವಣ ಸಾಧನಾ ಸಪ್ತಾಹ ಹಾಗೂ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿ, ಇಂಚಗೇರಿ ಸದ್ಗುರುಗಳು ತೋರಿದ ದಾರಿಯಲ್ಲಿ ನಡೆದರೆ ಜೀವನ ಪಾವನವಾಗುತ್ತದೆ ಎಂದರು.

ಶಂಕರೆಪ್ಪ ಮಹಾರಾಜರು ಮಾತನಾಡಿ, ಇಂಚಗೇರಿ ಮಠವು ಜಾತಿ, ಮತ, ಪಂಥವೆನ್ನದೆ ನೊಂದವರ ಕಣ್ಣೀರೊರೆಸುವ ಕಾರ್ಯವಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲೂ ಸಕ್ರಿಯವಾಗಿ ಭಾಗವಹಿಸಿದೆ. ಗೋವಾ ವಿಮೋಚನೆ, ಗೋಹತ್ಯೆ ನಿಷೇಧ, ಭೂದಾನ ಚಳವಳಿ, ಅಂತರ್ಜಾತಿ-ಅಂತಧರ್ಮಿಯ ವಿವಾಹ ಮಾಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದರು.

ಭೀಮಣ್ಣ ಮಹಾರಾಜರು, ವಿವೇಕಾನಂದ ಮಹಾರಾಜರು, ಸದಾಶಿವ ಮಹಾರಾಜರು, ಭೀಮಾಶಂಕರ ಶರಣರು, ದಿವಾನಮಳ ಮಹಾರಾಜರು, ಸಿದ್ಧಾರೂಢ ಶರಣರು. ಶಿವಲಿಂಗಪ್ಪ ಜಂಬಗಿ, ಹಣಮಂತ ಮಾಡಗ್ಯಾಳ, ದುರಗಪ್ಪ ವಡ್ಡರ, ಸದಾನಂದ ನಾವಿ, ಎಂ.ಪಿ. ಪಾಟೀಲ, ಸುರೇಶ ಕಾಂಬಳೆ, ಜ್ಯೋತಿಬಾ ಮಾಳಿ ಇತರರಿದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net