

ಹೊಸಕೋಟೆ : ಸರ್ಕಾರಿ ಶಾಲೆಗಳೆಂದರೆ ಪಾಲಕರಲ್ಲಿ ಒಂದು ರೀತಿ ಕೀಳರಿಮೆ ಇದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳೇ ಇಂದಿಗೆ ಪುಣ್ಯವಂತರಾಗಿದ್ದು, ಸರ್ಕಾರಿ ಶಾಲೆಯಲ್ಲಿ ಓದಿ ಸಾಧನೆ ಮಾಡಿದರೆ ಇತಿಹಾಸ ಸೃಷ್ಟಿ ಮಾಡಿದಂತೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥ ಹೊಸಕೋಟೆ ಸೇವಾ ಬಳಗ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಹೇಳಿದರು. ನಗರದ ಎಂವಿ ಬಡಾವಣೆಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಶ್ರೀ ಧರ್ಮಸ್ಥಳ ಮಂಜುನಾಥ ಹೊಸಕೋಟೆ ಸೇವಾ ಬಳಗ ಟ್ರಸ್ಟ್ನಿಂದ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆ ಮಕ್ಕಳ ಅಭ್ಯುದಯಕ್ಕೆ ಟ್ರಸ್ಟ್ ಕಾರ್ಯಪ್ರವೃತ್ತರಾಗಿದ್ದು, ದುಡಿಮೆಯ ಹಣದಿಂದ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆ ಮಾಡಲಾಗುತ್ತಿದೆ. ಈ ಬಾರಿ 6 ಸಾವಿರ ನೋಟ್ ಬುಕ್ಗಳನ್ನು ನೀಡಿದ್ದೇವೆ ಎಂದರು. ನಿವೃತ್ತ ಮುಖ್ಯಶಿಕ್ಷಕಿ ವಿಜಯಮ್ಮ ಮಾತನಾಡಿ, 1985&-86ರಲ್ಲಿ ಕೇವಲ ಒಂದು ಕೊಠಡಿಯಿಂದ ಪ್ರಾರಂಭವಾಗಿ ದೊಡ್ಡ ಶಾಲೆಯಾಗಿ ನಿಮಾರ್ಣವಾಗಿದೆ. ವಿದ್ಯಾರ್ಥಿಗಳು ಕೇವಲ ಕುಟುಂಬ ನಿರ್ವಹಣೆಗೆ ಶಿಕ್ಷಣ ಪಡೆಯದೆ ದೇಶಕ್ಕಾಗಿ ಏನಾದರೂ ಕೊಡುಗೆ ನೀಡುವಂತಹ ಸತ್ಪಜೆಗಳಾಗಿ ರೂಪುಗೊಳ್ಳಬೇಕು ಎಂದರು. ಮಧು, ಈರಣ್ಣ, ಮನೋಹರ್ ಮುಖ್ಯ ಶಿಕ್ಷಕಿ ಲಕ್ಷ್ಮೀ ಇದ್ದರು.