ಖಾಸಗಿ ಶಾಲೆಯ ವ್ಯಾಮೋಹ ಬೇಡ

FotoJet
Published on

ಪಾಲಕರಿಗೆ ಶಾಸಕ ಶರತ್ ಬಚ್ಚೇಗೌಡ ಸಲಹೆ

ನಂದಗುಡಿ: ಗ್ರಾಮೀಣ ಮಕ್ಕಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವುದರೊಂದಿಗೆ ಗುಣಾತ್ಮಕ ಶಿಕ್ಷಣ ಪಡೆಯುವ ಸಲುವಾಗಿ ಸರ್ಕಾರ ಹಲವು ಸವಲತ್ತು ನೀಡುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ಕೆ.ಸತ್ಯವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಸಕರ ಅನುದಾನದಡಿ 5 ಲಕ್ಷ ರೂ. ವೆಚ್ಚದ ಅಡುಗೆ ಕೋಣೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಪಾಲಕರು ಖಾಸಗಿ ಶಾಲೆಯ ವ್ಯಾಮೋಹ ತೊರೆದು ಸರ್ಕಾರಿ ಶಾಲೆ ಬಗ್ಗೆ ಅಭಿಮಾನ ಬೆಳೆಸಿಕೊಂಡಾಗ ಹಾಗೂ ಶಿಕ್ಷಕರು ಕೂಡ ಸರ್ಕಾರಿ ಶಾಲೆಗಳಲ್ಲಿ ಬಡ ಮಕ್ಕಳು ಬರುತ್ತಾರೆಂಬ ಭಾವನೆ ಮೂಡಿದಾಗ ಶಿಕ್ಷಣದ ಗುಣಮಟ್ಟ ಉತ್ತಮವಾಗುತ್ತದೆ. ಮನುಷ್ಯ ಎಷ್ಟೇ ಉನ್ನತ ಸ್ಥಾನಕ್ಕೆ ಬೆಳೆದರೂ, ಹುಟ್ಟಿದ ಊರು, ವಿದ್ಯೆ ಕಲಿಸಿದ ಶಾಲೆ ಮರೆಯಬಾರದು ಎಂದರು.

ಗ್ರಾಪಂ ಸದಸ್ಯರಾದ ಮಂಜುಳಾ ಎಸ್.ಪಿ.ರಾಜಣ್ಣ, ದೇವರಾಜು, ಎಸ್.ಎಫ್.ಸಿ.ಎಸ್.ನಿರ್ದೇಶಕ ದೊಡ್ಡಮನೆ ರಮೇಶ್, ಮುಖಂಡರಾದ ಎಸ್.ಪಿ.ಕೃಷ್ಣಪ್ಪ, ಎಸ್.ಟಿ.ಎಂ.ಮುನಿರಾಜು, ರಘುನಾಥ್, ಎಸ್.ಪಿ.ವಿಜಯಕುಮಾರ್, ಎಸ್.ಪಿ.ಶ್ರೀನಿವಾಸ್, ಜಿ.ಎಂ.ಆಂಜಿನಪ್ಪ, ಎಸ್.ಮುನಿರಾಜು, ಕರಪನಹಳ್ಳಿ ಪಿ.ನಾರಾಯಣಪ್ಪ, ಗುತ್ತಿಗೆದಾರರಾದ ಎಂ.ವಿ.ಅರುಣ್‌ಕುಮಾರ್, ಎಂ.ಸಿ. ವೆಂಕಟೇಶ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

| ಬಚ್ಚೇಗೌಡ ಶಾಸಕ ಶರತ್ದಾನಗಳಲ್ಲೆ ಶ್ರೇಷ್ಠವಾದದ್ದು ವಿದ್ಯಾದಾನ. ಹಣವಂತರು ದೇವಸ್ಥಾನಗಳನ್ನು ನಿರ್ಮಿಸಲು ಹಣ ಖರ್ಚು ಮಾಡುವ ಬದಲು, ಶಾಲೆಗಳನ್ನು ದತ್ತು ಪಡೆದು ಗ್ರಾಮೀಣ ಶಾಲೆಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಶಬೇಕು. ಜನಪ್ರತಿನಿಧಿಗಳು, ಎಸ್‌ಡಿಎಂಸಿ ಪದಾಧಿಕಾರಿಗಳು ಶಾಲೆಯ ಪ್ರಗತಿಯ ಬಗ್ಗೆ ಆಗಾಗ ಭೇಟಿ ಕೊಟ್ಟು ಕಾಳಜಿ ವಹಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net