ಮಧ್ಯವರ್ತಿಗಳನ್ನು ನಂಬಿ ಮೋಸ ಹೋಗದಿರಿ

Untitled-1
ದೊಡ್ಡಬಳ್ಳಾಪುರದ 13ನೇ ವಾರ್ಡ್​ ಭುವನೇಶ್ವರಿ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾಗರಿಕರಿಗೆ ಇ-&ಖಾತಾ ಪತ್ರಗಳನ್ನು ಶಾಸಕ ಧೀರಜ್​ ಮುನಿರಾಜು ವಿತರಿಸಿದರು. ನಗರಸಭೆ ಅಧ್ಯಕ್ಷೆ ಸುಮಿತ್ರ ಕೆ.ಆನಂದ್​, ಮಾಜಿ ಅಧ್ಯಕ್ಷ ಬಿ.ಮುದ್ದಪ್ಪ, ನಗರಸಭಾ ಸದಸ್ಯ ವೆಂಕಟೇಶ್​ ಇದ್ದರು.
Published on

ದೊಡ್ಡಬಳ್ಳಾಪುರ: ಜಮೀನಿನ ಅಧಿಕೃತ ದಾಖಲೆ ಹಾಗೂ ಆಸ್ತಿಗಳ ಮೂಲಕ ನಡೆಸುವ ವಹಿವಾಟುಗಳಿಗೆ ಅಲ್ಲದೇ ಗ್ರಾಮ ಠಾಣಾ ವ್ಯಾಪ್ತಿಯ ಹೊರಗಿನ ನಾಗರಿಕರಿಗೆ ಇ&-ಖಾತಾದಿಂದ ಹೆಚ್ಚಿನ ಅನುಕೂಲವಾಗಲಿದ್ದು, ಸಾರ್ವಜನಿಕರು ಮಧ್ಯವರ್ತಿಗಳನ್ನು ನಂಬಿ ಮೋಸ ಹೋಗದೆ, ಇ&ಖಾತಾ ಅಭಿಯಾನದ ಮೂಲಕ ಅರ್ಜಿ ಸಲ್ಲಿಸಿ 30 ದಿನಗಳಲ್ಲಿ ಪಡೆಯಬಹುದು ಎಂದು ಶಾಸಕ ಧೀರಜ್​ ಮುನಿರಾಜು ಹೇಳಿದರು.

ನಗರದ 13ನೇ ವಾರ್ಡ್​ ಭುವನೇಶ್ವರಿ ನಗರದಲ್ಲಿ ನಗರಸಭೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಇ-&ಖಾತಾ ಪತ್ರಗಳ ವಿತರಣಾ ಕಾರ್ಯಕ್ರಮ ಮಾತನಾಡಿದ ಅವರು, ಏ.4ರಂದು ಪ್ರಾರಂಭವಾಗಿರುವ ಇ&-ಖಾತಾ ಅಭಿಯಾನದಲ್ಲಿ ಸರ್ಕಾರ ಸೂಚಿಸಿರುವ 5 ದಾಖಲಾತಿಗಳನ್ನು ಸಲ್ಲಿಸುವ ಮೂಲಕ 30 ದಿನಗಳಲ್ಲಿ ಇ&-ಖಾತೆಗಳನ್ನು ಪಡೆಯಬಹುದಾಗಿದೆ. ಇದಕ್ಕೆ ಯಾವುದೇ ಮಧ್ಯವರ್ತಿಗಳ ಮೊರೆ ಹೋಗಬೇಡಿ. ಎಷ್ಟೋ ಬಿ&ಖಾತೆಯ ಆಸ್ತಿಗಳಿಗೆ ದಾಖಲೆಗಳು ಸಮರ್ಪಕವಾಗಿಲ್ಲದ ಕಾರಣ ಖಾತೆಗೆ ಒಳಪಡದೆ, ದುಪ್ಪಟ್ಟು ತೆರಿಗೆ ಕಟ್ಟಬೇಕಾಗಿರುತ್ತದೆ. ಅಂತಹ ಆಸ್ತಿಗಳು ಇ&ಖಾತೆ ಮಾಡಿಸಿಕೊಂಡರೆ ಮಾಮೂಲಿನಂತೆ ತೆರಿಗೆ ಕಟ್ಟಿದರೆ ಸಾಕು. ಆಸ್ತಿಯ ಮೇಲಿನ ಸಾಲ, ಮಾರಾಟ ಮೊದಲಾದ ಸಂದರ್ಭಗಳಲ್ಲಿ ಇ&ಖಾತೆಯ ಅವಶ್ಯಕವಿರುತ್ತದೆ. ಭೂಮಿ ಬೆಲೆ ಚಿನ್ನದಂತಾಗಿದ್ದು, ಆಸ್ತಿಗಳನ್ನು ಇಂದು ಮಾರುವುದು ಸುಲಭ ಆದರೆ ಮತ್ತೆ ಪಡೆಯಬೇಕಾದರೆ ಕಷ್ಟಸಾಧ್ಯವಿದೆ. ಆದ್ದರಿಂದ ಯಾರೂ ಆಸ್ತಿಗಳನ್ನು ಮಾರಾಟ ಮಾಡದೇ ಉಳಿಸಿಕೊಂಡು ಸಕಾಲಕ್ಕೆ ಆಸ್ತಿ ತೆರಿಗೆ ಪಾವತಿ ಮಾಡುವಂತೆ ಕಿವಿ ಮಾತು ಹೇಳಿದರು.

ವಾರ್ಡ್​ನ ನಗರಸಭಾ ಸದಸ್ಯ ಬಂತಿ ವೆಂಕಟೇಶ್​ ಮಾತನಾಡಿ, ನೇಕಾರರು ಹೆಚ್ಚಾಗಿರುವ 13ನೇ ವಾರ್ಡ್​ ಭುವನೇಶ್ವರಿ ನಗರದಲ್ಲಿ ಇ ಖಾತೆಗಳಾಗದೇ ಸಮಸ್ಯೆಗಳಾಗಿದ್ದು, ಇಂದು ಅದನ್ನು ಪರಿಹರಿಸುವತ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಭುವನೇಶ್ವರಿ ನಗರದ ಮುಖ್ಯರಸ್ತೆಗೆ 28 ಲಕ್ಷ ರೂ.ಗಳ, ನಗರೋತ್ಥಾನದಿಂದ ವಾರ್ಡ್​?ನಲ್ಲಿ ಡಾಂಬರೀಕರಣ, ಕಾಂಕ್ರಿಟ್​ ರಸ್ತೆ ಸೇರಿ 75 ಲಕ್ಷ ರೂಗಳ ಕಾಮಗಾರಿಗಳು ನಡೆಯಲಿವೆ. ಅಂತೆಯೇ ಓವರ್​ಹೆಡ್​ ಟ್ಯಾಂಕ್​ ನಿಮಾರ್ಣ, ಸೇರಿ ನೀರು, ಚರಂಡಿ ಮೊದಲಾದ ಮೂಲ ಸೌಕರ್ಯಗಳಿಗೆ ಒತ್ತು ನೀಡಲಾಗುತ್ತಿದೆ . ಅಲ್ಪ ಸಂಖ್ಯಾತರ ನಿಧಿಯಿಂದ 35 ಲಕ್ಷ ರೂ. ಕಾಮಗಾರಿಗಳು ನಡೆಯಲಿವೆ ಎಂದರು. ಇದೇ ವೇಳೆ ಇ&ಖಾತೆ ಮಾಡಿಸಿಕೊಂಡ ನಾಗರಿಕರಿಗೆ ನಗರಸಭೆಯಿಂದ ಇ&ಖಾತೆಗಳ ಪತ್ರಗಳನ್ನು ಶಾಸಕರು ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net