ಕಣ್ಣಿಗೆ ಆರೈಕೆಯಲ್ಲಿ ಉದಾಸೀನತೆ ಬೇಡ

ಕಿಕ್ಕೇರಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗುರುವಾರ ಉಚಿತ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಮೊಟ್ಟೆ ಮಂಜು, ನಂದಿನಿ, ಸುನೀತಾ, ಸೂರ್ಯನಾರಾಯಣ, ಉಮೇಶ್, ಆರ್.ಕೆ. ಸಂಜಯ್, ನಳಿನಿ, ವಿಮಲಾ ಮತ್ತಿತರರಿದ್ದರು.
ಕಿಕ್ಕೇರಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗುರುವಾರ ಉಚಿತ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಮೊಟ್ಟೆ ಮಂಜು, ನಂದಿನಿ, ಸುನೀತಾ, ಸೂರ್ಯನಾರಾಯಣ, ಉಮೇಶ್, ಆರ್.ಕೆ. ಸಂಜಯ್, ನಳಿನಿ, ವಿಮಲಾ ಮತ್ತಿತರರಿದ್ದರು.
Published on

ಕಿಕ್ಕೇರಿ: ಕಣ್ಣಿನ ಆರೈಕೆಯಲ್ಲಿ ಉದಾಸೀನತೆ, ಸ್ವಯಂ ಚಿಕಿತ್ಸೆಯಿಂದ ಮತ್ತಷ್ಟು ಸಮಸ್ಯೆ ಎದುರಾಗಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಸಮನ್ವಾಯಧಿಕಾರಿ ನಂದಿನಿ ತಿಳಿಸಿದರು.

ಇಲ್ಲಿನ ಕುರುಹಿನಶೆಟ್ಟಿ ಸಮುದಾಯ ಭವನದಲ್ಲಿ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಹಾಸನದ ಐ ದೃಷ್ಟಿ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

ಟಿವಿ, ಮೊಬೈಲ್, ಮೊಬೈಲ್ ಗೇಮಿಂಗ್ ವೀಕ್ಷಣೆ ಕಣ್ಣಿಗೆ ನೇರವಾಗಿ ಪರಿಣಾಮ ಬೀರಲಿದೆ. ಕಣ್ಣು ಪಂಚೇದ್ರಿಯಗಳಲ್ಲಿ ಮುಖ್ಯವಾದ ಅಂಗವಾಗಿದ್ದು, ಹೆಚ್ಚಿನ ಜೋಪಾನ ಮಾಡಿಕೊಳ್ಳಬೇಕಿದೆ ಎಂದರು.

ಶುಶ್ರೂಷಕಿ ಜಶ್ವಿನಿ ಅವರು ಬಿಪಿ, ಶುಗರ್ ಥೈರಾಯಿಡ್ ಕುರಿತು ಮಾತನಾಡಿ, ಮಿತ ಆಹಾರ, ಯೋಗ, ಧ್ಯಾನ ಉತ್ತಮ ಹವ್ಯಾಸಗಳು ರೋಗ ಬಾರದಂತೆ ತಡೆಯಲು ಸಹಕರಿಸಲಿವೆ ಎಂದು ಮಾಹಿತಿ ನೀಡಿದರು. ಐ ದೃಷ್ಟಿ ಕಣ್ಣಿನ ಆಸ್ಪತ್ರೆ ವತಿಯಿಂದ ಕಣ್ಣಿನ ಉಚಿತ ತಪಾಸಣೆ ಶಿಬಿರ ನಡೆಸಲಾಯಿತು. ಸುನೀತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕುರುಹಿನಶೆಟ್ಟಿ ಸಂಘದ ಸೂರ್ಯನಾರಾಯಣ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ಜನತೆಗೆ ಉಚಿತವಾಗಿ ನಡೆಯುವ ಶಿಬಿರಗಳು ಅಕ್ಷಯಪಾತ್ರೆಯಂತಾಗಿವೆ. ಸಂಸ್ಥೆ ಹೆಚ್ಚಿನ ಮಟ್ಟದಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಬೇಕಿದೆ ಎಂದರು.

ಐ ದೃಷ್ಟಿ ಆಸ್ಪತ್ರೆಯ ನೇತ್ರ ತಜ್ಞ ಆರ್.ಕೆ. ಸಂಜಯ್ ಕಣ್ಣಿನ ಆರೈಕೆ ಕುರಿತು ಮಾತನಾಡಿ, 40ವರ್ಷಗಳ ನಂತರ ಕಡ್ಡಾಯವಾಗಿ ನೇತ್ರ ತಪಾಸಣೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಇದೇ ವೇಳೆ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. 80 ಜನರು ಕಣ್ಣಿನ ತಪಾಸಣೆಗೆ ಒಳಗಾದರು. 4 ಜನರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷೆ ನಳಿನಿ, ಸದಸ್ಯರಾದ ಮೊಟ್ಟೆ ಮಂಜು, ಕುಮಾರ್, ಶಿವರಾಂ, ಸುನೀತಾ, ಒಕ್ಕೂಟದ ಮಾಜಿ ಅಧ್ಯಕ್ಷೆ ವಿಮಲಾ, ನೇತ್ರ ತಪಾಸಣೆ ತಜ್ಞರಾದ ಸಂಜಯ್, ಡಿ.ಎಂ.ಸುಮಾ, ಮೋನಿಷಾ, ಮೇಲ್ವಿಚಾರಕಿ ಯಶೋದಾ, ಸೇವಾ ಪ್ರತಿನಿಧಿ ಗೀತಾ, ಜಯಲಕ್ಷ್ಮೀ, ರತ್ನಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net