

ಮೂಗೂರು: ಜನರು ಆರೋಗ್ಯದ ಬಗ್ಗೆ ನಿರ್ಲಕ್ಷೃ ತಾಳದೆ ಉಚಿತ ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಉಪನ್ಯಾಸಕ ಮೂಗೂರು ಕುಮಾರಸ್ವಾಮಿ ಹೇಳಿದರು.
ಮೂಗೂರು ಗ್ರಾಮದ ಪಂಚಾಯಿತಿ ಕಚೇರಿ ಆವರಣದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ತಿ.ನರಸೀಪುರದ ಸ್ವಾಮಿ ನಸಿರ್ಂಗ್ ಹೋಂ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದ ಹಳ್ಳಿಗಾಡಿನ ಜನರು ಚಿಕಿತ್ಸಾ ವೆಚ್ಚವನ್ನು ಭರಿಸಲು ಸಾಧ್ಯವಾಗದೆ ಪರದಾಡುವಂತಾಗಿದೆ ಇಂತಹ ಸಂದರ್ಭದಲ್ಲಿ ಜನತೆಗೆ ಆರೋಗ್ಯ ಉಚಿತ ಶಿಬಿರಗಳು ಸಹಕಾರಿಯಾಗಲಿದೆ ಎಂದರು.
ಗ್ರಾಮೀಣ ಭಾಗದ ಜನರು ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು ಕಾಲಕಾಲಕ್ಕೆ ತಪಾಸಣೆಗೆ ಒಳಪಡಬೇಕೆಂದರು.
ಶಿಬಿರದಲ್ಲಿ ಬಂಜೆತನ ಸಮಸ್ಯೆ, ಥೈರಾಯ್ಡ, ಶ್ವಾಸಕೋಶ, ಹೃದಯ, ರಕ್ತ ಹೀನತೆ, ಪಿಸಿಒಡಿ ಸಮಸ್ಯೆಗಳ ತಪಾಸಣೆ ನಡೆಸಲಾಯಿತು. ಗ್ರಾ.ಪಂ.ಅಧ್ಯಕ್ಷ ಎಂ.ಡಿ.ಲೋಕೇಶ್, ಡಾ.ಮಲ್ಲಿಕಾರ್ಜುನ ಸ್ವಾಮಿ, ಡಾ.ಭಾರ್ಗವಿ, ಡಾ.ನಿರಂಜನ್, ಎಂ.ಎಂ.ಜಯಣ್ಣ, ಎಂ. ಸಿದ್ದರಾಜು, ಅರವಿಂದ್, ವಾಟಳುಪುರ ಸುರೇಶ್, ಪೂಜಿತಾ, ಮೆಡಿಕಲ್ ಕುಮಾರ್ ಇತರರು ಇದ್ದರು.