ಕ್ಯಾನ್ಸರ್​ ರೋಗಕ್ಕೆ ಹೆದರಬೇಡಿ

Don't be afraid of cancer
ವಿಜಯಪುರದ ಬಿಎಲ್​ಡಿಇ ಡೀಮ್ಡ್​ ವಿವಿಯ ಬಿ.ಎಂ. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯದ ಶಸ ಚಿಕಿತ್ಸಾ ವಿಭಾಗದಲ್ಲಿ ಕ್ಯಾನ್ಸರ್​ ರೋಗ ಉಚಿತ ತಪಾಸಣೆ ಮತ್ತು ಜಾಗೃತಿ ಅಭಿಯಾನ ಸಪ್ತಾಹ ಸಮಾರೋಪ ನಡೆಯಿತು. ಡಾ. ಮಂಜುನಾಥ ಕೋಟೆಣ್ಣವರ, ಡಾ. ರಮಾಕಾಂತ ಬಳೂರಕರ, ಡಾ. ಸಂಜು ರಾಠೋಡ ಮತ್ತಿತರರಿದ್ದರು.
Published on

ವಿಜಯಪುರ: ಜನರು ಕ್ಯಾನ್ಸರ್​ ಬಗ್ಗೆ ಎಚ್ಚರಿಕೆ ವಹಿಸಬೇಕು, ವಿನಾ ಭಯಪಡಬೇಡಿ ಎಂದು ಬಿಎಲ್​ಡಿಇ ಡೀಮ್ಡ್​ ವಿಶ್ವವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯದ ಶಸಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಹೇಳಿದರು.

ನಗರದ ಬಿಎಲ್​ಡಿಇ ಡೀಮ್ಡ್​ ವಿವಿಯ ಬಿ.ಎಂ. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯದ ಶಸ ಚಿಕಿತ್ಸಾ ವಿಭಾಗದ ವತಿಯಿಂದ ಜಿಲ್ಲಾ ಶಸ ಚಿಕಿತ್ಸಕರ ಸಂದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕ್ಯಾನ್ಸರ್​ ರೋಗ ಉಚಿತ ತಪಾಸಣೆ ಮತ್ತು ಜಾಗೃತಿ ಅಭಿಯಾನ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಜನಸಾಮಾನ್ಯರಲ್ಲಿ ಕ್ಯಾನ್ಸರ್​ ರೋಗದ ಬಗ್ಗೆ ತಿಳಿವಳಿಕೆ ಮೂಡಿಸಲು ಪ್ರತಿ ವರ್ಷ ವಿಶ್ವದಾದ್ಯಂತ ಫೆ. 4 ರಂದು ವಿಶ್ವ ಕ್ಯಾನ್ಸರ್​ ದಿನ ಆಚರಿಸಲಾಗುತ್ತದೆ. ಕ್ಯಾನ್ಸರ್​ ರೋಗಕ್ಕೆ ಸಂಬಂಧಿಸಿದಂತೆ ಈಗಲೂ ಸಾಕಷ್ಟು ಮೂಢನಂಬಿಕೆಗಳು ಪ್ರಚಲಿತದಲ್ಲಿವೆ. ಅದರ ಬಗ್ಗೆ ಎಚ್ಚರವಿರಬೇಕು. ಆದರೆ, ಯಾವುದೇ ಭಯ ಬೇಡ ಎಂದು ಅವರು ಸಲಹೆ ನೀಡಿದರು.

ಇಲ್ಲಿನ ಆಸ್ಪತ್ರೆಯಲ್ಲಿ ಎಲ್ಲ ಬಗೆಯ ಕ್ಯಾನ್ಸರ್​ ರೋಗಗಳು ಕಂಡು ಹಿಡಿಯುವ ಸಾಧನಗಳಿವೆ. ಸಂಪೂರ್ಣ ಚಿಕಿತ್ಸೆಗಳು ಉಚಿತವಾಗಿ ಅಥವಾ ಅತಿ ಕಡಿಮೆ ದರದಲ್ಲಿ ಲಭ್ಯವಿದ್ದು, ಹಲವು ಪರಿಣತ ತ ವೈದ್ಯರ ಸೇವೆಯೂ ಇದೆ. ಮೊದಲಿನಂತೆ ಕ್ಯಾನ್ಸರ್​ ರೋಗ ಚಿಕಿತ್ಸೆಗಾಗಿ ಮುಂಬೈ, ಬೆಂಗಳೂರಿನಂತಹ ದೊಡ್ಡ ಊರುಗಳಿಗೆ ಅಲೆದಾಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಕ್ಯಾನ್ಸರ್​ ಶಸ ಚಿಕಿತ್ಸಕ ಡಾ. ಸಂಜೀವ ರಾಠೋಡ ಮಾತನಾಡಿ, ಕ್ಯಾನ್ಸರ್​ ರೋಗವು ಸಾಮಾನ್ಯವಾಗಿ ದುಶ್ಚಟಗಳಾದ ತಂಬಾಕು, ಧೂಮಪಾನ, ಸಾರಾಯಿ ಸೇವನೆಗಳಿಂದ ಮತ್ತು ಅಸಾಮಾನ್ಯವಾಗಿ ಅನುವಂಶಿಕವಾಗಿ ಬರುತ್ತವೆ. ಹೀಗಾಗಿ ಅಂತಹ ದುಶ್ಚಟಗಳಿಂದ ದೂರವಿದ್ದು, ಆರೋಗ್ಯವಂತ ಜೀವನಶೈಲಿ ಪಾಲಿಸಲು ಸಲಹೆ ನೀಡಿದರು.

ಕ್ಯಾನ್ಸರ್​ ಶಸ ಚಿಕಿತ್ಸಕ ಡಾ. ಶೈಲೇಶ ಕನ್ನೂರ ಮಾತನಾಡಿ, ವಿವಿಧ ಸಾಮಾನ್ಯ ಕ್ಯಾನ್ಸರ್​ ರೋಗಗಳ ಗುಣ ಲಣಗಳು, ಅವುಗಳನ್ನು ಕಂಡು ಹಿಡಿಯುವ ವಿಧಾನ ಹಾಗೂ ಚಿಕಿತ್ಸೆ ಪದ್ಧತಿಗಳ ಕುರಿತು ವಿವರಿಸಿದರು. ಅಲ್ಲದೆ, ಕ್ಯಾನ್ಸರ್​ ರೋಗದ ಯಾವುದೇ ಲಣಗಳು ಕಂಡು ಬಂದರೆ ರ್ನಿಲಕ್ಷಿಸದೆ, ತ್ವರಿತವಾಗಿ ವೈದ್ಯರನ್ನು ಕಾಣಲು ಕಿವಿಮಾತು ಹೇಳಿದರು.

ಆಸ್ಪತ್ರೆಯ ವೈದ್ಯಕಿಯ ಅಧೀಕ ಡಾ. ರಾಜೇಶ ಹೊನ್ನುಟಗಿ, ಜಿಲ್ಲಾ ಶಸ ಚಿಕಿತ್ಸಕರ ಸಂದ ಕಾರ್ಯದರ್ಶಿ ಡಾ. ರಮಾಕಾಂತ ಬಳೂರಕರ, ಉಪ ಪ್ರಾಚಾರ್ಯ ಡಾ. ಎಂ.ಬಿ. ಪಾಟೀಲ, ಡೀನ್​ ಫ್ಯಾಕಲ್ಟಿ ಆಫ್​ ಮೆಡಿಸಿನ್​ ಡಾ. ತೇಜಸ್ವಿನಿ ವಲ್ಲಭ, ಡಾ. ವಿಜಯಾ ಪಾಟೀಲ, ಡಾ. ಗಿರೀಶ ಕುಲ್ಲೊಳ್ಳಿ, ಡಾ. ಎಸ್​.ಎಸ್​. ಪಾಟೀಲ, ಡಾ. ಮಂಜುನಾಥ ಸಾವಂತ, ಡಾ. ವಿಜಯ ಈಶ್ವರಪ್ಪಗೋಳ, ಡಾ. ನಾಗರಾಜ ಬಿರಾದಾರ, ಡಾ. ವೀಣಾ ಂಟೆಪ್ಪಗೋಳ ಮತ್ತಿತರರಿದ್ದರು.

ಕಳೆದ ಸೋಮವಾರದಿಂದ ಶನಿವಾರದವರೆಗೆ ನಡೆದ ಸಪ್ತಾಹದಲ್ಲಿ 200 ಕ್ಕೂ ಅಧಿಕ ಕ್ಯಾನ್ಸರ್​ ಲಣವಿರುವ ರೋಗಿಗಳನ್ನು ಉಚಿತವಾಗಿ ತಪಾಸಣೆ ನಡೆಸಿ, ಅವಶ್ಯ ಸಲಹೆ ಮತ್ತು ಚಿಕಿತ್ಸೆ ನೀಡಲಾಯಿತು. 25 ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು.

ಕ್ಯಾನ್ಸರ್​ ರೋಗ ದಿನಾಚರಣೆ ಹಿನ್ನೆಲೆಯಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ 35 ವಿದ್ಯಾರ್ಥಿಗಳಿಗೆ ವೈಾನಿಕ ಮತ್ತು ಶೈಣಿಕ ಸಂಶೋಧನೆ ಸೊಸೈಟಿ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಸೊಸೈಟಿ ಅಧ್ಯೆ ಡಾ. ಎಚ್​.ಟಿ. ಲತಾದೇವಿ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net