ಪ್ರತಿಭೆ ಪ್ರದರ್ಶನಕ್ಕೆ ಹಿಂಜರಿಯದಿರಿ

Puraskara
Published on

ನರಗುಂದ: ಅವಕಾಶ ಸಿಕ್ಕಾಗ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ ಪ್ರದರ್ಶನಕ್ಕೆ ಹಿಂಜರಿಯಬಾರದು ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಪ್ರೌಢಶಾಲೆಯಲ್ಲಿ 1991-92ರಲ್ಲಿ ಕಲಿತ ವಿದ್ಯಾರ್ಥಿಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಹಳೆಯ ವಿದ್ಯಾರ್ಥಿಗಳ ಇಂತಹ ಪ್ರೋತ್ಸಾಹದಿಂದ ಈಗಿನ ವಿದ್ಯಾರ್ಥಿಗಳಿಗೆ ಓದಲು ಪ್ರೇರಣೆ ನೀಡಿದಂತಾಗುತ್ತದೆ ಎಂದರು.

ಶಾಲಾ ಮುಖ್ಯೋಪಾಧ್ಯಾಯಿನಿ ಎಸ್.ಕೆ. ಹರಪನಹಳ್ಳಿ, ಆರ್.ಡಿ. ಗದ್ದನಕೇರಿ ಮಾತನಾಡಿದರು. 8ನೇ ತರಗತಿಯ ಕಸ್ತೂರಿ ಜಾಧವ, 9ನೇ ತರಗತಿಯ ಶಿವಲಿಂಗವ್ವ ಗಾಣಿಗೇರ, 10ನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮೇಘರಾಜ ಗಾಣಿಗೇರ, ದ್ವಿತೀಯ ಅಮೀನಭಿ ಅನಸಾರಿ, ತೃತೀಯ ಆನಂದ ಹೊಸಮನಿ ಹಾಗೂ ಶಾಲೆಯ ಕ್ರಿಯಾಶೀಲ ವಿದ್ಯಾರ್ಥಿ ಶರಣು ಹೊನ್ನೂರ ಅವರಿಗೆ ತಲಾ 1,500 ರೂಪಾಯಿ ನಗದು, ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು.

ಶಿಕ್ಷಕ ಶಿವಾನಂದ ಮಣ್ಣೂರಮಠ, ಮಹೇಶ ಪಾಟೀಲ, ಯೋಗೇಶ ಪಾಟೀಲ, ರವಿ ದೇಶಪಾಂಡೆ, ವಿರುಪಾಕ್ಷಿ ಹಿರೇಮಠ, ನಾಗೇಶ ಅಪ್ರೋಜಿ, ಡಾ.ಪ್ರಕಾಶ ಬೀರನೂರ, ಶ್ರೀಪತಿ ಗುಜಮಾಗಡಿ, ಸಂತೋಷ ಲೂಟಿಮಠ, ಈಶ್ವರ ಗೋವೇಶ್ವರ, ಎಸ್.ಎಸ್. ಸಜ್ಜನರ, ಎಸ್.ಎಂ. ಹಾಡಕರ, ಅತಿಥಿ ಶಿಕ್ಷಕರಾದ ರಾಘವೇಂದ್ರ ಗೆಜ್ಜಿ, ಹನಮಂತ ಸೋಮಣ್ಣವರ, ಅಕ್ಷತಾ ಪಾಟೀಲ, ಸಂಜೀವ ಮಾಳಗೆ, ವೆಂಕಟೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net