ಹೆದರದೇ ಕೋವಿಶೀಲ್ಡ್ ಪಡೆಯಿರಿ

25GKK1-Web
ಗೋಕಾಕ ನಗರದ ಕೆಎಲ್‌ಇ ಆಸ್ಪತ್ರೆಯಲ್ಲಿ ವಿವಿಧ ಮಠಾಧೀಶರು ಕೋವಿಶೀಲ್ಡ್ ಲಸಿಕೆ ಪಡೆದರು. ಮಲ್ಲಯ್ಯ ಸ್ವಾಮೀಜಿ, ಮುರುಘರಾಜೇಂದ್ರ ಸ್ವಾಮೀಜಿ, ರಾಚೋಟಿಶ್ವರ ಶಿವಾಚಾರ್ಯ ಸ್ವಾಮೀಜಿ, ಕಾಶೀನಾಥ ಸ್ವಾಮೀಜಿ, ಎಂ.ಡಿ.ಚುನಮರಿ, ಸೋಮಶೇಖರ ಮಗದುಮ್, ರೂಪಾ ಮುನವಳ್ಳಿ, ಅನುಪಾ ಕೌಶಿಕ, ಡಾ.ಧರೇಪ್ಪ ಚೌಗಲಾ, ಡಾ.ಅರುಣ ವಣ್ಣೂರ, ಸಿ.ಸಿ.ಕೊಣ್ಣೂರ ಇತರರು ಇದ್ದರು.
Published on

ಗೋಕಾಕ: ಮಹಾಮಾರಿ ಕರೊನಾ ವೈರಸ್‌ಗೆ ಭಾರತ ದೇಶ ಲಸಿಕೆ ಕಂಡು ಹಿಡಿದು, ದೇಶದ ಜನರ ರಕ್ಷಣೆಯೊಂದಿಗೆ ಇತರೆ ದೇಶಗಳ ರಕ್ಷಣೆಗೂ ಮುಂದಾಗಿರುವುದು ಶ್ಲಾಘನೀಯ ಎಂದು ಘೋಡಗೇರಿಯ ಮಲ್ಲಯ್ಯ ಸ್ವಾಮೀಜಿ ಹೇಳಿದರು.

ನಗರದ ಕೆಎಲ್‌ಇ ಆಸ್ಪತ್ರೆಯಲ್ಲಿ ತಾಲೂಕಿನ ಮಠಾಧೀಶರಿಗೆ ಕೋವಿಶೀಲ್ಡ್ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಗುರುವಾರ ಲಸಿಕೆ ಪಡೆದು ಮಾತನಾಡಿದ ಶ್ರೀಗಳು, ಕರೊನಾ ನಿಯಂತ್ರಣಕ್ಕಾಗಿ ಜನತೆ ಹೆದರದೆ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಮಹಾಮಾರಿ ನಿಯಂತ್ರಣಕ್ಕೆ ಮುಂದಾಗಬೇಕು. ನಾವೆಲ್ಲ ಮಠಾಧೀಶರು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಜನತೆಗೆ ಸಂದೇಶ ನೀಡುತ್ತಿದ್ದು, ಎಲ್ಲರೂ ಜಾಗೃತರಾಗಿ ಲಸಿಕೆ
ಪಡೆದು ಅಮೂಲ್ಯವಾದ ಜೀವ ರಕ್ಷಿಸಿಕೊಳ್ಳುವಂತೆ ಸಲಹೆ ನೀಡಿದರು.

ಕೆಎಲ್‌ಇ ನಿರ್ದೇಶಕ ಜಯಾನಂದ ಮುನವಳ್ಳಿ ಮಾತನಾಡಿ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕರೊನಾ ವೈರಸ್‌ಗೆ ಕಡಿವಾಣ ಹಾಕಲು ಲಸಿಕೆ ಪಡೆಯುವುದೊಂದೇ ಪರಿಹಾರವಾಗಿದೆ. ಜನತೆಯಲ್ಲಿ ಜಾಗೃತಿಮೂಡಿಸಲು ಈ ಕಾರ್ಯಕ್ರಮವನ್ನು ಕೆಎಲ್‌ಇ ಸಂಸ್ಥೆ ಹಮ್ಮಿಕೊಂಡಿದೆ. ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ ಎಂದು ತಿಳಿಸಿದರು. ನಗರದ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಮುಪ್ಪಯ್ಯನಮಠದ ರಾಚೋಟಿಶ್ವರ ಶಿವಾಚಾರ್ಯ ಸ್ವಾಮೀಜಿ, ಘೋಡಗೇರಿಯ ಕಾಶೀನಾಥ ಸ್ವಾಮೀಜಿ, ಸುಣಧೋಳಿಯ ಶಿವಾನಂದ ಸ್ವಾಮೀಜಿ, ಪ್ರಭಾ ಶುಗರ್ಸ್‌ನ ದಯಾನಂದ ಸ್ವಾಮೀಜಿ, ಕಪರಟ್ಟಿ-ಕಳ್ಳಿಗುದ್ದಿಯ ಬಸವರಾಜ ಹಿರೇಮಠ ಸ್ವಾಮೀಜಿ, ಬೆಣಚಿನಮರಡಿಯ ಬ್ರಹ್ಮಾನಂದ ಸ್ವಾಮೀಜಿ, ಮಮದಾಪುರದ ಚರಮೂರ್ತೇಶ್ವರ ಸ್ವಾಮೀಜಿ, ತವಗ ಬಾಳಯ್ಯ ಮಠದ ಬ್ರಹ್ಮಶ್ರೀ ಸಿದ್ದಲಿಂಗಯ್ಯ ಸ್ವಾಮೀಜಿ, ಮುನ್ಯಾಳದ ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ, ಗಣ್ಯರಾದ ಎಂ.ಡಿ.ಚುನಮರಿ, ಸೋಮಶೇಖರ ಮಗದುಮ್, ಸಿ.ಸಿ.ಕೊಣ್ಣೂರ, ಮಲ್ಲಿಕಾರ್ಜುನ ಕಲ್ಲೋಳ್ಳಿ, ಜಿ.ಎಂ.ಅಂದಾನಿ, ರೂಪಾ ಮುನವಳ್ಳಿ, ಅನುಪಾ ಕೌಶಿಕ, ಡಾ.ಧರೇಪ್ಪ ಚೌಗಲಾ, ಡಾ.ಅರುಣ ವಣ್ಣೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net