ಕವಿತಾಳ: ತೊಪ್ಪಲದೊಡ್ಡಿ ಸಾಧು, ಸಂತರು, ಶರಣರಿಗೆ ಜನ್ಮ ನೀಡಿದ ಪುಣ್ಯ ಗ್ರಾಮವಾಗಿದೆ ಎಂದು ಅಂಕಲಿಮಠದ ಶರಣ ವೀರಭದ್ರ ಸ್ವಾಮೀಜಿ ಹೇಳಿದರು.
ತೊಪ್ಪಲದೊಡ್ಡಿ ಗ್ರಾಮದಲ್ಲಿ ಭಾನುವಾರ ಸದ್ಗುರು ನಿರುಪಾದೀಶ್ವರ 20ನೇ ಜಾತ್ರೋತ್ಸವ ನಿಮಿತ್ತ 1182ನೇ ತುಲಾಭಾರ, ಸದ್ಗುರು ಅಡಿವೇಶ ನಿರುಪಾದೀಶ್ವರ ಪುರಾಣ ಮಂಗಲ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅಂಕಲಿಮಠದ ಆರಾಧ್ಯ ದೈವವಾದ ನಿರುಪಾದಿ ಶರಣರು ಜನಿಸಿದ ಗ್ರಾಮ ತೊಪ್ಪಲದೊಡ್ಡಿಯಲ್ಲಿ ಗ್ರಾಮಸ್ಥರು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಸುತ್ತಿರುವುದು ಖುಷಿಯ ಸಂಗತಿ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಹಿರಿಯ ಶ್ರೀಗಳ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು. ಮಲ್ಲಮ್ಮ ಸೂಗಪ್ಪ ಮೇಟಿ ಅವರು ವೀರಭದ್ರ ಶ್ರೀಗಳಿಗೆ ತುಲಾಭಾರ ಸೇವೆ ಸಲ್ಲಿಸಿದರು.
ಪುರಾಣ ಪ್ರವಚನಕಾರ ಮಲ್ಲಯ್ಯ ಶಾಸ್ತ್ರಿಗಳು ಗುಡದೂರು, ತಬಲವಾದಕ ಅಮರಯ್ಯಸ್ವಾಮಿ ಗುಂಡಾ, ಸಂಗೀತಗಾರ ಅಮರಗುಂಡಪ್ಪ ಮೇಟಿ, ಪ್ರಮುಖರಾದ ರಾಜಶೇಖರ ಗೌಡ, ಶ್ರೀನಿವಾಸ, ಸೂಗಪ್ಪ ಮೇಟಿ, ಮಹಾಂತೇಶ ಗೌಡ, ಪರನಗೌಡ, ಅಮರೇಶಗೌಡ, ಶರಣಬಸವ ಅಂಗಡಿ, ಮಲ್ಲಯ್ಯ ಹಾದಿಮನಿ, ಹನುಮಂತ ಪಾಟೀಲ್, ರಮೇಶ ಚಟ್ನಿ, ವೀರಭದ್ರಪ್ಪ, ತಿಮ್ಮಣ್ಣ ಇದ್ದರು.