ಸ್ವಾತಂತ್ರ್ಯ ದುರ್ಬಳಕೆ ಮಾಡಿಕೊಳ್ಳದಿರಿ

15KMD-1
ಕೆ.ಎಂ.ದೊಡ್ಡಿಯ ಪ್ರಾರ್ಥನಾ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ ಸ್ವಾತಂತ್ರೃ ದಿನಾಚರಣೆಯಲ್ಲಿ ವಿವಿಧ ಛೇದ್ಮ ವೇಷ ಧರಿಸಿ ಗಮನ ಸೆಳೆದ ವಿದ್ಯಾರ್ಥಿಗಳು.
Published on

ಕೆ.ಎಂ.ದೊಡ್ಡಿ : ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಹಲವು ಮಹನೀಯರು ಹೋರಾಟ ಮಾಡಿ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಜನತೆ ಅದನ್ನು ದುರ್ಬಳಕೆ ಮಾಡಿಕೊಳ್ಳದೆ ಕಾನೂನು ಪಾಲಿಸಿ ಎಂದು ಸಬ್ ಇನ್‌ಸ್ಪೆಕ್ಟರ್ ರಾಮಸ್ವಾಮಿ ತಿಳಿಸಿದರು.
ಇಲ್ಲಿನ ಪ್ರಾರ್ಥನಾ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಗುರುವಾರ ಆಯೋಜಿಸಿದ್ದ 78ನೇ ಸ್ವಾತಂತ್ರೃ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ದೇಶದ ಸ್ವಾತಂತ್ರ್ಯ ಪಡೆಯಲು ಹಲವು ಮಹಾತ್ಮರು ಪ್ರಾಣ ತ್ಯಾಗ ಮಾಡಿದ್ದು, ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು. ಹರ್ ಘರ್ ತಿರಂಗಾ ಕಾರ್ಯಕ್ರಮ ಉತ್ತಮ ಕಾರ್ಯವಾಗಿದ್ದು ಪ್ರತಿಯೊಬ್ಬರೂ ದೇಶ ಪ್ರೇಮ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಈ ವೇಳೆ ಶಾಲಾ ಮಕ್ಕಳು ವಿವಿಧ ಛೇದ್ಮ ವೇಷ ಧರಿಸಿ ಗಮನ ಸೆಳೆದರು. ಬಳಿಕ ವಿವಿಧ ದೇಶ ಭಕ್ತಿಗೀತೆಗಳನ್ನು ಹಾಡಿದರೆ ಮತ್ತೆ ಕೆಲವರು ನೃತ್ಯ ಮಾಡಿ ಗಮನ ಸೆಳೆದರು. ಸಂಸ್ಥೆಯ ಅಧ್ಯಕ್ಷ ರವಿಸಾವಂದಿಪುರ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಕಾರ್ಯದರ್ಶಿ ಸೌಮ್ಯಾಕೃಷ್ಣ, ನಿರ್ದೇಶಕರಾದ ವೈ.ಬಿ.ಶ್ರೀಕಂಠಸ್ವಾಮಿ, ರಘುವೆಂಟೇಗೌಡ, ಶಿಕ್ಷಕರಾದ ಅಶ್ವಿನಿ, ಸವಿತಾ, ಸ್ಮಿತಾ, ರಮ್ಯಾ, ಪ್ರಿಯಾಂಕಾ, ಕೃತಿಕಾ, ರಂಜಿತಾ, ಕೆ.ಎನ್. ಅನುಪಮಾ, ಲಕ್ಷ್ಮೀ, ನವ್ಯಾ, ಶ್ವೇತಾ, ಆಶಾ ಸೇರಿದಂತೆ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net